ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ನಡೆಸಲು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಖಡಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾಡಳಿತ ಅದನ್ನು ಪಾಲಿಸುವ ಪ್ರಕ್ರಿಯೆಗೆ ಸಜ್ಜಾಗುತ್ತಿದೆ. ಈ ನಡುವೆ ತ್ಯಾಜ್ಯವನ್ನು ತರಲು ಬಿಡುವುದಿಲ್ಲ ಎಂದು ಹೇಳಿರುವ ಸಜಿಪನಡು ಗ್ರಾಮಸ್ಥರು ಅದನ್ನು ವಿರೋಧಿಸಲು ಸೋಮವಾರ ತಯಾರಾಗಿ ನಿಂತ ಘಟನೆಯೂ ನಡೆಯಿತು.
ಸಹಾಯಕ ಕಮೀಷನರ್ ಸೂಚಿಸಿದಂತೆ ಎಲ್ಲ ತಯಾರಿಗಳನ್ನು ನಡೆಸಲಾಗುತ್ತಿದೆ. ಪುರಸಭೆಯ ಸೂಚಿತ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ನಡೆಸಲಾಗುತ್ತಿದ್ದು, ಇದು ಒಣಕಸದ ವಿಲೇವಾರಿಯಷ್ಟೇ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ, ಈ ಕುರಿತು ಗ್ರಾಪಂಗೆ ಪುರಸಭೆ ಮಾಹಿತಿ ನೀಡಿದೆ. ಈ ಮಧ್ಯೆ ಸೋಮವಾರ ಕಸದ ವಾಹನಗಳು ಸಜೀಪನಡುವಿಗೆ ತೆರಳಲಿಲ್ಲ.
ಇಲ್ಲಿನ ಸಮಸ್ಯೆ ನಿವಾರಿಸದೆ ಪರಿಸರ ಇಲಾಖೆ ನಿಬಂಧನೆಗಳನ್ನು ಪಾಲಿಸದೆ ಇಲಾಖೆ ತ್ಯಾಜ್ಯವನ್ನು ಇಲ್ಲಿ ಹಾಕಲು ನಾವು ಬಿಡುವುದಿಲ್ಲ ಎಂದಿರುವ ಗ್ರಾಪಂ ಅಧ್ಯಕ್ಷ ಮಹಮ್ಮದ್ ನಾಸೀರ್, ಪ್ರಮುಖರಾದ ಅಬುಬಕ್ಕರ್ ಸಜಿಪ, ತ್ಯಾಜ್ಯ ತಂದು ಸುರಿದರೆ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ.
Be the first to comment on "ಎ.ಸಿ. ಸೂಚನೆಯಂತೆ ಕಸ ವಿಲೇವಾರಿ – ಪ್ರತಿಭಟನೆಗೂ ತಯಾರಿ"