ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪದ್ಮನಾಭ ವಿ. ಆಯ್ಕೆಗೊಂಡರು.

ನಿರ್ದೇಶಕರಾಗಿ ರಮೇಶ್ ಸಾಲ್ಯಾನ್, ಅರುಣ್ ಕುಮಾರ್ ಕೆ., ಬಿ. ರಮೇಶ್ ಸಾಲ್ಯಾನ್, ನಾಗೇಶ್ ಬಿ., ಎಂ. ವಾಮನ ಟೈಲರ್, ವಿಶ್ವನಾಥ ಕೆ. ಬಿ., ಸುರೇಶ್ ಎನ್., ಸತೀಶ, ವಿ. ವಿಜಯ ಕುಮಾರ್, ಜಯಂತಿ, ವಿದ್ಯಾ, ಜನಾರ್ಧನ ಬೊಂಡಾಲ, ಜಗನ್ನಿವಾಸ ಗೌಡ, ಎಂ. ಕೆ. ಗಣೇಶ್ ಸಮಗಾರ, ವಿಜಯಲಕ್ಷ್ಮೀ ಆಯ್ಕೆಯಾಗಿರುತ್ತಾರೆ. ಫೆ. 22ರಂದು ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಮಂಗಳೂರು, ಅಧೀಕ್ಷಕರಾದ ಬಿ. ನಾಗೇಂದ್ರ ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127


Be the first to comment on "ಸಮಾಜ ಸೇವಾ ಸಹಕಾರಿ ಸಂಘ ಆಡಳಿತ ಮಂಡಳಿ ಆಯ್ಕೆ"