ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಒಂದು ದಿನದ ಅಧ್ಯಯನ ಶಿಬಿರ ಮಾ.3 ರಂದು ಮಂಗಳವಾರ ಬಿ.ಸಿ.ರೋಡಿನ ರಂಗೋಲಿ ಸಭಾಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ಹೇಳಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಸ್ವರಾಜ್ ಇಂಡಿಯಾ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಉದ್ಘಾಟಿಸಲಿದ್ದು, ರೈತಸಂಘ ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ, ಪ್ರಮುಖರಾದ ನಾಗರತ್ನಮ್ಮ ವಿ.ಪಾಟೀಲ್, ಜಿ.ಟಿ.ರಾಮಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಡಾ. ಸಂದೀಪ್ ನಾಯಕ್, ಮೂಡಿಗೆರೆ ಮಂಜುನಾಥ್, ರವಿಕಿರಣ್ ಪುಣಚ ಭಾಗವಹಿಸುವರು.
ಬಳಿಕ ಇಡೀ ದಿನ ರೈತಸಂಘದ ಹುಟ್ಟು ಬೆಳವಣಿಗೆ ಸಾಗುತ್ತಿರುವ ದಾರಿ, ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು, ದೇಶದ ಆರ್ಥಿಕತೆ ಮತ್ತು ಸಾಗುತ್ತಿರುವ ಮಾರ್ಗ ಹಾಗೂ ಚಳವಳಿಗಳು ಮತ್ತು ಪರ್ಯಾಯ ರಾಜಕಾರಣ ಕುರಿತು ಬಡಗಲಾಪುರ ನಾಗೇಂದ್ರ, ರವಿಕಿರಣ್ ಪುಣಚ, ಶಿವಸುಂದರ್, ಹಾಗೂ ಅಲ್ಲಮಪ್ರಭು ಬೆಟ್ಟದೂರು ವಿಷಯ ಮಂಡಿಸುವರು ಎಂದರು. ಸಂಜೆ ನಡೆಯುವ ಸಮಾರೋಪದಲ್ಲಿ ಸಮಾರೋಪ ಭಾಷಣವನ್ನು ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾಡಲಿದ್ದಾರೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಪ್ರಮುಖರಾದ ಸುರೇಶ್‌ಚಂದ್ರ ರೈ, ವಿವಿಯನ್ ಪಿಂಟೊ, ಆಲ್ವಿನ್ ಮಿನೇಜಸ್ ಇದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ
Be the first to comment on "ಬಂಟ್ವಾಳದಲ್ಲಿ ರಾಜ್ಯ ರೈತಸಂಘದಿಂದ ಅಧ್ಯಯನ ಕಾರ್ಯಾಗಾರ"