- ಭೂಮಿಯನ್ನು ತಂಪಾಗಿಸಿ, ಕೃಷಿಕರನ್ನು ಕಂಗಾಲಾಗಿಸಿದ ಮಳೆ
ಬಂಟ್ವಾಳ ಸುತ್ತಮುತ್ತಲಿನ ಪರಿಸರದಲ್ಲಿ ಹಾಗೂ ತಾಲೂಕಿನ ಹಲವೆಡೆ ಗುರುವಾರ ಬೆಳಗಿನ ಜಾವ ಅನಿರೀಕ್ಷಿತವಾಗಿ ಮಳೆ ಸುರಿದು ತಂಪಾದ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು. ಆದರೆ ಅವೇಳೆಯಲ್ಲಿ ಬಂದ ಮಳೆಯಿಂದಾಗಿ ಕೃಷಿಕರು, ಅಡಕೆ ಬೆಳೆಗಾರರು ಕಂಗಾಲಾದರು. ಅಂಗಳದಲ್ಲಿ ರಾಶಿ ಹಾಕಿದ್ದ ಅಡಕೆ, ಕಾಳುಮೆಣಸುಗಳನ್ನು ಸುರಕ್ಷಿತವಾದ ಜಾಗದಲ್ಲಿರಿಸಲು ಹರಸಾಹಸಪಟ್ಟರು. ಮಳೆಯಿಂದಾಗಿ ಬೆಳಗ್ಗೆ ಸುಮಾರು 11 ಗಂಟೆವರೆಗೆ ಮೋಡ ಕವಿದ ವಾತಾವರಣ ಕಂಡುಬಂತು. ಮಧ್ಯಾಹ್ನದ ಬಳಿಕ ಪ್ರಖರ ಬಿಸಿಲು ಇಣುಕಿತು. ಬಂಟ್ವಾಳ, ಕಲ್ಲಡ್ಕ, ಸಿದ್ಧಕಟ್ಟೆ, ಮಾಣಿ, ಕನ್ಯಾನ ಸಹಿತ ಹಲವು ಪ್ರದೇಶಗಳಲ್ಲಿ ಮಳೆ ಸುರಿದಿದೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬೆಳಗ್ಗೆ ಮಳೆ, ಮಧ್ಯಾಹ್ನ ಮತ್ತದೇ ಬಿಸಿಲು"