ಸಜೀಪಮೂಡದ ಸಜೀಪಮಾಗಣೆ ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದ ದ ವತಿಯಿಂದ ನಾಲ್ಕನೇ ವರ್ಷದ ಯಕ್ಷಗಾನ ಸೇವೆ ಬಯಲಾಟ ಶ್ರೀ ದೇವಿ ಮಹಾತ್ಮೆ ಸಜೀಪಮೂಡ ಪೆಲತ್ತಕಟ್ಟೆ ಮೈದಾನದಲ್ಲಿ ನಡೆಯಲಿದೆ.

ಈ ಸಂದರ್ಭ ಧಾರ್ಮಿಕ ಸಭೆ ನಡೆಯುವುದು ಎಂದು ಶ್ರೀ ದುರ್ಗಾಪರಮೇಶ್ವರೀ ಭಕ್ತವೃಂದದ ಆಡಳಿತ ಮಂಡಳಿ ತಿಳಿಸಿದೆ. ಫೆ. 23ರಂದು ಸಂಜೆ 5ಕ್ಕೆ ಸಮೀಪ ಮುನ್ನೂರು ಯುವಕ ಸಂಘ ಕಂದೂರು ಇಲ್ಲಿಂದ ಪೆಲತ್ತಕಟ್ಟೆಗೆ ಭಜನೆ, ಚೆಂಡೆ, ಬ್ಯಾಂಟ್, ವಾದನಗಳೊಂದಿಗೆಮೇಳದ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 6.30ಕ್ಕೆ ಧಾರ್ಮಿಕ ಫ್ರಭೋಧನಾ ಸಭೆಗೆ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ಹಾಗೂ ಸದಾನಂದ ವೆಂಕಟೇಶ ಅಸ್ರಣ್ಣ ಭಾಗವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಚೌಕಿ ಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127


Be the first to comment on "ಫೆ.23ರಂದು ಸಜೀಪಮೂಡದಲ್ಲಿ ಸೇವಾ ಬಯಲಾಟ, ಧಾರ್ಮಿಕ ಸಭೆ"