ಇಂದು ತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಗಮನಾರ್ಹ. ಗ್ರಾಮಮಟ್ಟದಲ್ಲಿ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರನ್ನು ಸೇರಿಸಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದರೆ ಜನರ ಮನಃಪರಿವರ್ತನೆ ಮಾಡುವ ಕೆಲಸ ಮಾಡಿ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ ಹೇಳಿದರು.

ಗುರುವಾರ ತಾ.ಪಂ.ಎಸ್.ಜಿ.ಆರ್.ಎಸ್.ವೈ,ಸಭಾಂಗಣದಲ್ಲಿ ಸ್ವಚ್ಚಭಾರತ್ ಮಿಷನ್, ತಾಲೂಕು ಸಹಭಾಗಿತ್ವದಲ್ಲಿ ಜಿ.ಪಂ.ಸದಸ್ಯರು, ತಾಲೂಕು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾ.ಪಂ.ಅಧ್ಯಕ್ಷ , ಉಪಾಧ್ಯಕ್ಷ, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಘನತ್ಯಾಜ್ಯ ನಿರ್ವಹಣಾ ಕುರಿತಾದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ಎಂ.ಎಸ್.ಮಹಮ್ಮದ್ , ಕಮಲಾಕ್ಷಿ ಕೆ. ಪೂಜಾರಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,
ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಯೋಜನಾ ನಿರ್ದೇಶಕ ಮದುಕುಮಾರ್, ಜಿ.ಪಂ.ಸ್ವಚ್ಚ ಭಾರತ ಮಿಷನ್ ಸಂಯೋಜಕಿ ಮಂಜುಳಾ ಉಪಸ್ಥಿತರಿದ್ದರು. ತಾ.ಪಂ.ಇ.ಒ.ರಾಜಣ್ಣ, ಪ್ರಾಸ್ತಾವಿಕವಾಗಿ ಮಾತನಾಡಿದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127


Be the first to comment on "ತ್ಯಾಜ್ಯ ನಿರ್ವಹಣೆಯಲ್ಲಿ ಪಿಡಿಒಗಳ ಪಾತ್ರ ಪ್ರಮುಖ: ತಾಪಂ ಅಧ್ಯಕ್ಷ ಕರ್ಕೇರ"