ಚಿತ್ರಗಳು: ಅಪುಲ್ ಇರಾ

Photo: Apul Alva Ira
ಸೋಮವಾರ ದಿನವಿಡೀ ಮಂಗಳೂರು ಸಹಿತ ರಾಜ್ಯದ ಜನರನ್ನು ಬೆಚ್ಚಿಬೀಳಿಸುವ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು. ದಿನವಿಡೀ ನಡೆದ ಘಟನಾವಳಿಗಳ ಚಿತ್ರಗಳನ್ನು ಅಪುಲ್ ಆಳ್ವ ಇರಾ ಸೆರೆಹಿಡಿದಿದ್ದಾರೆ.
ಅಪರಿಚಿತನೊಬ್ಬ ಬಿಟ್ಟುಹೋದ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂಬ ಅನುಮಾನ ಆತಂಕಕ್ಕೆ ಕಾರಣವಾಯಿತು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಬಾಂಬ್ ಅನ್ನು ಸುರಕ್ಷಿತವಾಗಿ ಸ್ಫೋಟಿಸುವ ಮೂಲಕ ನಾಶಗೊಳಿಸಲಾಯಿತು. ಘಟನೆ ಬಳಿಕ ಮಂಗಳೂರು ಸಹಿತ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ.

Photo: Apul Alva Ira

Photo: Apul Alva Ira

Photo: Apul Alva Ira

Photo: Apul Alva Ira
ಬೆಳಗ್ಗೆ 10 ಗಂಟೆ ಸುಮಾರಿಗೆ ಬ್ಯಾಗ್ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿತ್ತು. ತಕ್ಷಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಆಗಮಿಸಿದರು.

Photo: Apul Alva Ira
ಸ್ಫೋಟಕ ವಸ್ತುಗಳನ್ನು ಇಡುವ ವಿಶೇಷ ವಾಹನವೊಂದರಲ್ಲಿ ಬ್ಯಾಗ್ ಇಡಲಾಯಿತು. ಸುತ್ತ ಪೊಲೀಸರಿಂದ ಭದ್ರತೆಯನ್ನು ಕೈಗೊಳ್ಳಲಾಯಿತು. ಬಳಿಕ ಅಲ್ಲಿಂದ ವಿಮಾನ ನಿಲ್ದಾಣದ ಪಕ್ಕದ ಕೆಂಜಾರು ಮೈದಾನಕ್ಕೆ ಸ್ಥಳಾಂತರ ಮಾಡಲಾಯಿತು.

Photo: Apul Alva Ira
ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ನಡೆಯಿತು. ಬಾಂಬ್‌ನ್ನು ನಿಷ್ಕ್ರಿಯಗೊಳಿಸುವ ಬದಲಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅವರನ್ನು ಸ್ಫೋಟ ಮಾಡಲಾಯಿತು. ಸುತ್ತ ಮರಳಿನ ಮೂಟೆಗಳನ್ನು ಇಟ್ಟು ಅದರ ನಡುವಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಯಿತು. ಬೆಳಗ್ಗೆ ಆರಂಭಗೊಂಡ ಕಾರ್ಯಾಚರಣೆ ಸಂಜೆ ಸುಮಾರು 5.45ರ ವೇಳೆ ಅಂತ್ಯಗೊಂಡಿತು.

Photo: Apul Alva Ira
Be the first to comment on "ದಿನವಿಡೀ ಆತಂಕ ಸೃಷ್ಟಿಸಿದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ"