ಮೇಲ್ಕಾರ್ ನ ಮಾರ್ನಬೈಲಿನಲ್ಲಿರುವ ಮಹಿಳಾ ಕಾಲೇಜಿನಲ್ಲಿ 19ರಂದು ನಿರತ ಸಾಹಿತ್ಯ ಸಂಪದದ 23ನೇ ಹುಟ್ಟುಹಬ್ಬ ವಾರ್ಷಿಕೋತ್ಸವ ನಡೆಯಲಿದ್ದು, ಈ ಸಂದರ್ಭ ನಾನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ವೇಳೆ ರಾಜ್ಯಮಟ್ಟದಲ್ಲಿ ಅಂಚೆ ಮೂಲಕ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷ ಬೃಜೇಶ್ ಅಂಚನ್ ತಿಳಿಸಿದ್ದಾರೆ.
ವಿಜೇತರ ವಿವರ ಹೀಗಿದೆ. ಕವನ ಸ್ಪರ್ಧೆ : ಪ್ರಥಮ : ವಿಶ್ವನಾಥ ಎನ್ ನೇರಳಕಟ್ಟೆ, ದ್ವಿತೀಯ : ವಾಣಿಶ್ರೀ ಕೊಂಚಾಡಿ
ತೃತೀಯ : ಎಂ. ಪಿ. ಬಶೀರ್ ಅಹಮ್ಮದ್, ಸಣ್ಣ ಕಥಾ ಸ್ಪರ್ಧೆ :ಪ್ರಥಮ : ಧೀರೇಂದ್ರ, ನಾಗರಹಳ್ಳಿ. ಬೆಂಗಳೂರು, ದ್ವಿತೀಯ : ಸುಭಾಶಿಣಿ, ಶ್ರೀ ರಾಮ ಶಾಲೆ ಕಲ್ಲಡ್ಕ, ತೃತೀಯ : ನಳಿನ ಬಾಲಸುಬ್ರಹ್ಮಣ್ಯ ಶಿವಮೊಗ್ಗ, ಚುಟುಕ ಸ್ಪರ್ಧೆ : ಪ್ರಥಮ : ನಿಶಿತ್ ಪದುಂಬ, ಬೆಳ್ತಂಗಡಿ, ದ್ವಿತೀಯ : ಉಷಾ ದಿನೇಶ್, ಶಿವಮೊಗ್ಗ, ತೃತೀಯ : ರಂಜನ್ ಸಾಧಿತ್ ಕಡಬ
Be the first to comment on "ನಿರತ ಸಾಹಿತ್ಯ ಸಂಪದ ಸ್ಪರ್ಧೆ ಫಲಿತಾಂಶ, 19ರಂದು ಪ್ರದಾನ"