ಕಟೀಲು ಕ್ಷೇತ್ರದಲ್ಲಿ ಜನವರಿ 22 ರಿಂದ ಫೆಬ್ರವರಿ 3 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾಯಾಗ, ಕೋಟಿ ಜಪ ಯಜ್ಞ ಹಾಗೂ ಅಷ್ಟಪವಿತ್ರ ನಾಗಮಂಡಲ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಬಂಟ್ವಾಳ ತಾಲೂಕಿನ ಎಲ್ಲ ಗ್ರಾಮಗಳ ಭಗವದ್ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ಇನ್ನಿತರ ಜವಾಬ್ದಾರಿಗಳ ಹಂಚಿಕೆಯ ಬಗ್ಗೆ ಚರ್ಚಿಸಲು ಜ.5ರಂದು ಭಾನುವಾರ ಬೆಳಗ್ಗೆ 10ಕ್ಕೆ ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ನಲ್ಲಿ ಸಭೆ ನಡೆಯಲಿದೆ.
ತಾಲೂಕಿನ ಎಲ್ಲ ದೇವಸ್ಥಾನ ದೈವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರುಗಳು, ಸಂಘಸಂಸ್ಥೆಗಳ ಅಧ್ಯಕ್ಷರುಗಳ ಸಮಾಲೋಚನಾ ಸಭೆ ಇದಾಗಿದ್ದು, ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ ಸಹಿತ ಹಲವು ಗಣ್ಯರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಬಂಟ್ವಾಳ ತಾಲೂಕು ಸಮಿತಿ ಸಂಚಾಲಕರಾದ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ, ಹಾಗೂ ಭುವನೇಶ್ ಪಚ್ಚಿನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಕಟೀಲು ಬ್ರಹ್ಮಕಲಶೋತ್ಸವ: ಜನವರಿ 5ರಂದು ಬಿ.ಸಿ.ರೋಡಿನಲ್ಲಿ ಸಭೆ"