ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 15ನೇ ವಾರ್ಷಿಕೋತ್ಸವ ಹಾಗೂ ತೌಹೀದ್ ಅರೆಬಿಕ್ ಮದ್ರಸ ಮಕ್ಕಳ ಮೀಲಾದ್ ಮೀಟ್ ಕಾರ್ಯಕ್ರಮ ತೌಹೀದ್ ಶಾಲಾ ವಠಾರದಲ್ಲಿ ಭಾನುವಾರ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೌಲ್ಯಾಧರಿತ ಶಿಕ್ಷಣವು ಪ್ರತೀ ಶಿಕ್ಷಣ ಸಂಸ್ಥೆಯ ಉದ್ದೇಶವಾಗಬೇಕು. ಈ ನಿಟ್ಟಿನಲ್ಲಿ ತೌಹೀದ್ ಶಿಕ್ಷಣ ಸಂಸ್ಥೆಯು ಧಾರ್ಮಿಕ, ಲೌಖಿಕ ಶಿಕ್ಷಣ ನೀಡುವ ಮೂಲಕ ಬೆಳೆದುನಿಂತಿದೆ ಎಂದು ಹೇಳಿದರು.
ಪಣಂಬೂರು ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅಜ್ಮತ್ ಅಲಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗೆ ಒಗ್ಗಿಕೊಳ್ಳುವುದರ ಮೂಲಕ ಪ್ರಯೋಗಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್ ಅಧ್ಯಕ್ಷತೆ ವಹಿಸಿದ್ದರು.
ತೌಹೀದ್ ಶಿಕ್ಷಣ ಸಂಸ್ಥೆಯ ಮುಹಮ್ಮದ್ ಸಗೀರ್ ಪ್ರಸ್ತಾವಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮೆಟಿಲ್ಡಾ ಡಿಕೊಸ್ತಾ ವಾರ್ಷಿಕ ವರದಿ ವಾಚಿಸಿದರು. ಪ್ರತಿಭಾ ಪುಸರಸ್ಕಾರ, ಬಹುಮಾನಗಳನ್ನು ವಿತರಿಸಲಾಯಿತು. ಐಬಿ ಗ್ರೂಪ್‌ನ ಇಕ್ಬಾಲ್ ದುಬೈ, ಶಿಕ್ಷಣ ಸಂಯೋಜಕಿ ಸುಶೀಲ, ಪುರಸಭಾ ಸದಸ್ಯ ಮುನಿಶ್ ಅಲಿ, ಪ್ರಮುಖರಾದ ಪಿ. ಇಬ್ರಾಹಿಂ, ಬಿ.ಮುಹಮ್ಮದ್, ರಿಯಾಝ್ ಹುಸೈನ್, ಹನೀಫ್, ಸಂಶುದ್ದೀನ್, ಅಬೂಬಕರ್ ಸಿದ್ದೀಕ್ ರಹ್ಮಾನಿ, ರೈಫಾನ್ ಅಹ್ಮದ್, ವೆಂಕಪ್ಪ ಪೂಜಾರಿ ಹಾಜರಿದ್ದರು. ಕಾರ್ಯದರ್ಶಿ ಬಿ.ಅಬ್ದುಕ್ ಖಾದರ್ ಮಾಸ್ಟರ್ ಸ್ವಾಗತಿಸಿ, ಶಿಕ್ಷಕಿಯರಾದ ರಚನಾ ವಂದಿಸಿ, ಸೈನಾಝ್, ಶಾಕಿರ, ವೀಣಾ ನಿರೂಪಿಸಿದರು.
ಮೀಲಾದ್ ಮೀಟ್: ಎಸ್‌ಎಂಎಫ್ ಇದರ ಅಧ್ಯಕ್ಷ ಇರ್ಷಾದ್ ದಾರಿಮಿ ಮೀಲಾದ್ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ವಾಳ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಹೈದರ್ ಅಲಿ, ಬಂದರ್ ಮಸೀದಿ ಖತೀಬ್ ಸದಕತ್ತುಲ್ಲಾ ಫೈಝಿ, .ಬಿ.ಎಚ್.ಅಬ್ದುಲ್ ಖಾದರ್, ಅಬ್ದುಲ್ ಹಮೀದ್ ದಾರಿಮಿ, ಅಯ್ಯುಬ್ ಮುಸ್ಲಿಯಾರ್, ಮುನೀಶ್ ಅಲಿ, ಅಕ್ವರ್ ಅಡ್ಡೂರು ಹಾಜರಿದ್ದರು. ಈ ಸಂದರ್ಭದಲ್ಲಿ ಅಲ್ ಬಿರ್ರ್ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
Be the first to comment on "ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ, ಮೀಲಾದ್ ಮೀಟ್"