ಟೋಲ್ ಗಳಲ್ಲಿ ದಿನನಿತ್ಯ ಸಂಚರಿಸುವವರೇ, ನೀವು ಕ್ಯೂ ನಿಲ್ತೀರಾ? ಫಾಸ್ಟಾಗ್ ಹಾಕಿಸ್ಕೊಳ್ತೀರಾ?
ಕೇಂದ್ರ ಸರಕಾರ ಒಂದು ತಿಂಗಳ ಗಡುವು ವಿಸ್ತರಿಸಿದ್ದರೂ ಫಾಸ್ಟಾಗ್ ಕಡ್ಡಾಯಕ್ಕೆ ಟ್ರಯಲ್ ಗಳು ಭಾನುವಾರವೇ ಆರಂಭಗೊಂಡಿವೆ. ರಾ.ಹೆ. 75ರಲ್ಲಿ ಟೋಲ್ ಗಳಲ್ಲಿ ಕ್ಯಾಶ್ ಓನ್ಸಿ ಮತ್ತು ಫಾಸ್ಟಾಗ್ ಓನ್ಸಿ ಎಂಬ ಲೇನ್ ಗಳು ಕಂಡುಬಂದವು. ಫಾಸ್ಟಾಗ್ ಹಾಕಿಸಿಕೊಂಡವರಿಗೆ ರಾಜಮರ್ಯಾದೆ, ಇಲ್ಲದಿದ್ದರೆ ಕ್ಯೂ ಎಂಬ ಪರಿಸ್ಥಿತಿ ಇತ್ತು.
ಫಾಸ್ಟಾಗ್ ವ್ಯವಸ್ಥೆಯ ಮೂಲ ಉದ್ದೇಶವೇ ಟೋಲ್‌ಗಳಲ್ಲಿ ಕ್ಯಾಶ್‌ಲೆಸ್ ಪೇಮೆಂಟ್ ಅನ್ನು ಉತ್ತೇಜಿಸುವುದು. ವಾಹನ ದಟ್ಟಣೆಯನ್ನು ಕಡಿತಗೊಳಿಸುವುದು ಇದರ ಮತ್ತೂಂದು ಉದ್ದೇಶವಾಗಿದೆ. ಸರಕಾರ ಫಾಸ್ಟಾಗ್ ವಾಹನಗಳಿಗೆ ಶೇ. 2.5 ರಿಯಾಯಿತಿಯನ್ನು ನೀಡುತ್ತದೆ. ಇಂಧನ ಉಳಿತಾಯ ಬಹುದೊಡ್ಡ ಲಾಭ.
ಟೋಲ್ ಪ್ಲಾಜಾದಲ್ಲಿರುವ ಫಾಸ್ಟಾಗ್‌ಲೇನ್ ಮೂಲಕ ಹಾದು ಹೋದಾಗ ಸ್ವಯಂಚಾಲಿತವಾಗಿ ಆಗಿ ಸ್ಕ್ಯಾನ್ ಆಗುತ್ತದೆ. ಇದೇ ವೇಳೆ ಫಾಸ್ಟಾಗ್ ಖಾತೆಯಿಂದ ಶುಲ್ಕ ಸಂದಾಯವಾಗುತ್ತದೆ. ಇದರ ನೋಟಿಫಿಕೇಶನ್ ಮೊಬೈಲ್‌ಗಳಿಗೆ ಎಸ್‌ಎಂಎಸ್ ಮೂಲಕ ಬರುತ್ತದೆ. ದೇಶದ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟಾಗ್ ಲೇನ್ಗಳನ್ನು ಅಳವಡಿಸಲಾಗುತ್ತದೆ. ಅದರ ಮೂಲಕವೇ ವಾಹನಗಳು ಸಂಚರಿಸಬೇಕಾಗಿದ್ದು, ಟೋಲ್ ವೆಚ್ಚವನ್ನು ಫಾಸ್ಟಾಗ್ ಮೂಲಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಫಾಸ್ಟಾಗ್ ವ್ಯವಸ್ಥೆ ಅಳವಡಿಸದೇ ಇದ್ದ ವಾಹನವಾದರೆ ಟೋಲ್ ಮೊತ್ತದ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಟೋಲ್ನ ಒಂದು ಕಡೆ ಮಾತ್ರ ಫಾಸ್ಟಾಗ್ ಮತ್ತು ಇತರ ಪಾವತಿ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು ಕಂಡುಬಂತು. ಇಲ್ಲಿ ಫಾಸ್ಟಾಗ್ ಇಲ್ಲದ ವಾಹನಗಳು ಸರತಿ ಸಾಲಿನಲ್ಲಿ ಕಾಯಬೇಕಾಗಿ ಬರುತ್ತದೆ. ಉಳಿದ ಎಲ್ಲಾ ಲೇನ್ ಗಳಲ್ಲಿ (ಪಥ) ಫಾಸ್ಟಾಗ್ಗಳು ಮಾತ್ರ ಇರಲಿವೆ.
ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ
Be the first to comment on "ಕ್ಯೂ ನಿಲ್ತೀರಾ? ಫಾಸ್ಟಾಗ್ ಹಾಕಿಸ್ತೀರಾ?"