ಕೊನೆಗೂ ಬಂಟ್ವಾಳ ಪುರಸಭೆಗೆ ಮುಖ್ಯಾಧಿಕಾರಿ ನೇಮಕಗೊಂಡಿದ್ದಾರೆ. ಈ ಹಿಂದೆ ಬಂಟ್ವಾಳದಲ್ಲೇ ಮುಖ್ಯಾಧಿಕಾರಿ ಆಗಿದ್ದ ಲೀನಾ ಭ್ರಿಟ್ಟೊ ಅವರಿಗೆ ಮತ್ತೆ ಅಧಿಕಾರ ಲಭಿಸಿದೆ. ಇದುವರೆಗೆ ಅವರು ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ರೇಖಾ ಜೆ. ಶೆಟ್ಟಿ ವರ್ಗಾವಣೆ ಹೊಂದಿದ ಬಳಿಕ ಬಂಟ್ವಾಳಕ್ಕೆ ಯಾರೂ ಬಂದಿರಲಿಲ್ಲ. ಕೆಲ ದಿನಗಳ ಹಿಂದೆ ರಾಯಪ್ಪ ಅವರನ್ನು ಪ್ರಭಾರ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಕಳೆದೊಂದು ವಾರದಿಂದ ಕಸ ಎಸೆಯುವವರ ವಿರುದ್ಧ ಅವರು ಫೀಲ್ಡಿಗಿಳಿದಿದ್ದರು. ಇದೀಗ ಅವರ ಬದಲಿಗೆ ಲೀನಾ ಭ್ರಿಟ್ಟೊ ಮುಖ್ಯಾಧಿಕಾರಿಯಾಗಲಿದ್ಧಾರೆ.
ಯಾಕಿಷ್ಟು ಮಹತ್ವ: ಪುರಸಭೆ ಮುಖ್ಯಾಧಿಕಾರಿ ಹುದ್ದೆ ಎನ್ನುವುದು ಆಡಳಿತಾತ್ಮಕ ಹುದ್ದೆ. ನಗರವಾಸಿಗಳ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮುಖ್ಯಾಧಿಕಾರಿ ಅಗತ್ಯ. ಇದೀಗ ಬೆಳೆಯುತ್ತಿರುವ ಬಂಟ್ವಾಳ ಪುರಸಭೆಗೆ ಸಾಕಷ್ಟು ಸಮಸ್ಯೆಗಳೂ ಸುತ್ತಿಕೊಂಡಿದ್ದು, ಅವುಗಳನ್ನು ನಿಭಾಯಿಸುವ ಹೊಣೆಗಾರಿಕೆ ಆಡಳಿತಕ್ಕಿದೆ. ಜನಪ್ರತಿನಿಧಿಗಳ ಆಡಳಿತವೂ ಈಗಿಲ್ಲ.
ಕಸ ವಿಲೇವಾರಿ, ಒಳಚರಂಡಿ, ಕ್ಯಾಮರಾ, ಅರ್ಜಿ ವಿಲೇವಾರಿ, ಮಧ್ಯವರ್ತಿಗಳ ಕಾಟ ತಪ್ಪಿಸಿ ನೇರ ಕಡತ ವಿಲೇವಾರಿ ಹೀಗೆ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಮುಂದೆ ಸವಾಲು ನೂರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
Be the first to comment on "ಕೊನೆಗೂ ಬಂಟ್ವಾಳ ಪುರಸಭೆಗೆ ಮುಖ್ಯಾಧಿಕಾರಿ ನೇಮಕ – ಲೀನಾ ಬ್ರಿಟ್ಟೊ ಅವರಿಗೆ ಮತ್ತೆ ಅಧಿಕಾರ"