ಲೋರೆಟ್ಟೊ ಮಾತಾ ಚರ್ಚ್ ನ ವಾರ್ಷಿಕ ಹಬ್ಬದ ಪ್ರಯುಕ್ತ ಭಾನುವಾರ ಪರಮ ಪ್ರಸಾದ ದ ಮೆರವಣಿಗೆ ಭಕ್ತಿಪೂರ್ವಕ ವಾಗಿ,ಶ್ರದ್ಧೆಯಿಂದ ನಡೆಯಿತು.
ಜಾಹೀರಾತು
ಮಂಗಳೂರು ಧರ್ಮಪ್ರಾಂತ್ಯದ ಜೆಪ್ಪು ಸಂತ ಜೋಸಫ್ ಸೆಮಿನರಿಯ ರೆಕ್ಟರ್ ವಂ. ಆಂಟನಿ ಪಿಂಟೊ ಪ್ರಧಾನ ಧರ್ಮಗುರುಗಳಾಗಿ ನೂರಾರು ಭಕ್ತರೊಮದಿಗೆ ಬಲಿಪೂಜೆ ಯನ್ನು ಅರ್ಪಿಸಿದರು.
ಚರ್ಚ್ ನ ಧರ್ಮಗುರುಗಳಾದ ವಂ. ಎಲಿಯಸ್ ಡಿಸೋಜಾ, ವಂ. ಅನಿಲ್ ಫೆರ್ನಾಂಡಿಸ್, ಬಲಿಪುಜೆಯಲ್ಲಿ ಪಾಲ್ಗೊಂಡರು. ಅಲಂಕರಿತ ಜೇಪೀನಲ್ಲಿ ಚರ್ಚ್ ನಿಂದ ಆರಂಭಗೊಂಡ ಪರಮ ಪ್ರಸಾದದ ಮೆರವಣಿಗೆ ಬ್ಯಾಂಡ್ ವಾದ್ಯ, ಪಟಾಕಿಗಳ ಸಡಗರದೊಂದಿಗೆ ಲೋರೆಟ್ಟೊ ಅಂಚೆ ಕಚೇರಿಯಿಂದ ಲೋರೆಟ್ಟೊ ಪದವು ಮೂಲಕ ಚರ್ಚ್ ಗೆ ಬಂದು ಕೊನೆಗೊಂಡಿತು.
ಜಾಹೀರಾತು
ಇದೇ ಸಂದರ್ಭ ಚರ್ಚ್ ವ್ಯಾಪ್ತಿಯ ಎಲ್ಲಾ ಕ್ರೈಸ್ತ ಕುಟುಂಬಗಳಿಗೆ ಗೌರವ ಪೂರ್ವಕವಾಗಿ ಮೇಣದ ಬತ್ತಿ ಯನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನುಚರ್ಚ್ ಪಾಲನಾ ಮಂಡಳಿ ಭಕ್ತಿ, ಶಿಸ್ತು ಬದ್ಧವಾಗಿ ಆಯೋಜಿಸಿತ್ತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲೊರೆಟ್ಟೊ ಚರ್ಚ್ ವಾರ್ಷಿಕ ಹಬ್ಬ: ಪರಮಪ್ರಸಾದ ಮೆರವಣಿಗೆ"