ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ತುಳು ಕತೆ ಹೇಳುವ ಸ್ಪರ್ಧೆ ಮತ್ತು ತುಳು ಹಾಡು ಹೇಳುವ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ತುಳು ಕಥಾ ಸ್ಪರ್ಧೆ: ರಿಷಿಕಾ ( ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು) ಪ್ರಥಮ, ಅನನ್ಯ (ಸರಕಾರಿ ಪ್ರೌಢಶಾಲೆ ಪಂಜಿಕಲ್ಲು) ದ್ವಿತೀಯ, ಸಮ್ಯಕ್ ಜೈನ್ ( ಎಸ್ ವಿ ಎಸ್ ಆಂಗ್ಲಮಾಧ್ಯಮ ಶಾಲೆ ವಿದ್ಯಾಗಿರಿ) ಮತ್ತು ಆಕೃತಿ ( ಸರಕಾರಿ ಪ್ರೌಢಶಾಲೆ ಬಿಳಿಯೂರು) ತೃತೀಯ ಬಹುಮಾನ ಪಡೆದಿದ್ದಾರೆ.
ತುಳು ಹಾಡು ಹೇಳುವ ಸ್ಪರ್ಧೆ: ದೀಕ್ಷಿತ್ ( ಸರಕಾರಿ ಪ್ರೌಢಶಾಲೆ ಬೆಂಜನಪದವು) ಪ್ರಥಮ, ವೈಷ್ಣವಿ ( ಎಸ್ ಎಲ್ ಎನ್ ಪಿ ವಿದ್ಯಾಲಯ ಪಾಣೆಮಂಗಳೂರು) ದ್ವಿತೀಯ, ದಕ್ಷಾ ಜಿ. ( ಎಸ್ ವಿ ಎಸ್ ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ) ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸ್ಪರ್ಧಾ ಸಮಿತಿಯ ಸಂಚಾಲಕರಾದ ಕೆ.ರಮೇಶ ನಾಯಕ್ ರಾಯಿ ಮತ್ತು ಎ.ಗೋಪಾಲ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.24 ರಂದು ಬಹುಮಾನ ವಿತರಣೆ: ನವಂಬರ್ 24 ರಂದು ಬೆಳಿಗ್ಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಬಂಟ್ವಾಳ ತುಳುಕೂಟದ ವತಿಯಿಂದ ನಡೆಯುವ ತುಳು ನೃತ್ಯ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ತುಳು ಕತೆ, ಗಾಯನ ಸ್ಪರ್ಧೆಯ ಫಲಿತಾಂಶ"