ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನ ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಗಳ. ಶಾಲಾ ಉಸ್ತುವಾರಿ ಅಧಿಕಾರಿಗಳ ತಂಡ ಅಜೀಂ ಪ್ರೇಮ್ ಜೀ ಪೌಂಡೇಶನ್ ಸಹಯೋಗದಲ್ಲಿ ಶೈಕ್ಷಣಿಕ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಶಾಲೆಗೆ ಭೇಟಿ ನೀಡಿದರು.
ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಶಾಲಾ ಶೈಕ್ಷಣಿಕ ಹಾಗೂ ಭೌತಿಕ ಮಾಹಿತಿ, ಶಿಕ್ಷಕಿ ಸಂಗೀತ ಸರ್ಮ ಮಕ್ಕಳ ಕೃಷಿ ಚಟುವಟಿಕೆ ಹಾಗೂ ಪರಿಸರ ಜಾಗೃತಿಯ ಬಗ್ಗೆ ಮಾಹಿತಿಯನ್ನು ನೀಡಿದರು
.ಈ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಜಿ ಶಾಲೆಗೆ ಸಂಘ-ಸಂಸ್ಥೆಗಳು ನೀಡುತ್ತಿರುವ ಸಹಕಾರ ಹಾಗೂ ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .ಈ ಸಂದರ್ಭದಲ್ಲಿ ಶಾಲೆಗೆ ಕಳೆದ ಮೂರು ವರ್ಷಗಳಿಂದ ಉಚಿತ ತರಕಾರಿಗಳನ್ನು ನೀಡುತ್ತಿರುವ ಚಂದ್ರಿಕಾ ವೆಜಿಟೇಬಲ್ ನ ಮಾಲಕ ಮಹಮ್ಮದ್ ಶರೀಫ್ ದಂಪತಿ ಸಮೇತ ಅನಿರೀಕ್ಷಿತ ಭೇಟಿ ನೀಡಿದ್ದು ಅವರ ಸಹಕಾರವನ್ನು ಮೆಚ್ಚಿ ಅವರೊಂದಿಗೆ ಮಕ್ಕಳ ಜೊತೆ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡು ಶಾಲಾ ಬಿಸಿ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಜಯರಾಜ್ ಎಸ್ ಬಂಗೇರ ,ಕಾರ್ಯದರ್ಶಿ ಪಲ್ಲವಿ ಕಾರಂತ್, ರೋಟರಿ ಆನ್ಸ್ ಅಧ್ಯಕ್ಷ ವಿದ್ಯಾ ಎಸ್ ರೈ ,ರೋಟರಿ ಸದಸ್ಯರಾದ ಸುಕುಮಾರ್ ಬಂಟ್ವಾಳ ,ನಾರಾಯಣ ಸಿ ಪೆರ್ನೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿನ್ನ ಮೈರಾ ,ಹಾಗೂ ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು
Be the first to comment on "ಮಜಿ ಶಾಲೆಗೆ ಕುಷ್ಠಗಿ ತಾಲೂಕಿನ ತಂಡ ಅಧ್ಯಯನ ಭೇಟಿ"