ರಸ್ತೆ ಬದಿಯಲ್ಲಿ ಕಸ ಎಸೆಯುವವರು ಯಾವುದೇ ಲಜ್ಜೆ ಇಲ್ಲದೆ ಬಿಸುಟು ಹೋಗುವುದರ ವಿರುದ್ಧ ಬಂಟ್ವಾಳ ಪುರಸಭೆ ಕೊನೆಗೂ ಕಠಿಣ ನಿರ್ಧಾರ ಕೈಗೊಳ್ಳುವ ತೀರ್ಮಾನಕ್ಕೆ ಬಂದಿದೆ. ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ರಾಯಪ್ಪ ಅವರು ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿದ್ದು, ರಸ್ತೆ ಬದಿ ಕಸ ಹಾಕಿದರೆ ದಂಡ ಪಾವತಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಬಂಟ್ವಾಳ, ಬಿ.ಸಿ.ರೋಡ್, ಪಾಣೆಮಂಗಳೂರು, ಮೇಲ್ಕಾರ್, ಕೈಕಂಬ ಮೊದಲಾದ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಾದ ರಸ್ತೆ ಬದಿ, ಫ್ಲೈಓವರ್ ಕೆಳಗೆ ಕಸ ಎಸೆಯುವ ಪರಿಪಾಠವನ್ನು ಇನ್ನೂ ಕೆಲವರು ಇಟ್ಟುಕೊಂಡಿದ್ದಾರೆಈ ನಿಟ್ಟಿನಲ್ಲಿ ಪುರಸಭೆ ಈಗಿಟ್ಟಿರುವ ಹೆಜ್ಜೆಯತ್ತ ಎಲ್ಲರ ಕುತೂಹಲ ನೆಟ್ಟಿದೆ.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
Be the first to comment on "ರಸ್ತೆ ಬದಿ ಕಸ ಹಾಕಿದರೆ ದಂಡ: ಪುರಸಭೆ ವಾರ್ನಿಂಗ್"