ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಶಿಲ್ಪಿ ಅಣ್ಣಪ್ಪ ಮುರುಡೇಶ್ವರ ಅವರಿಗೆ ದೇವಳದ ಪ್ರಮುಖರು ವೀಳ್ಯವನ್ನಿತ್ತು ದೇವರ ಮುಂದೆ ಪ್ರಾರ್ಥಿಸಿ ಚಾಲನೆ ನೀಡಿದರು.

ಗರ್ಭಗುಡಿ,ಮುಖಮಂಟಪ,ಹಾಗೂ ಸುತ್ತು ಪೌಳಿಯ ಪಾದುಕದ ವರೆಗೆ, ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳಲಿದ್ದು, 2 ಕೋಟಿ 30 ಲಕ್ಷ ರೂ ಅಂದಾಜು ಕಾಮಗಾರಿ ಇದಾಗಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಮುಳ್ಳುಂಜ ವೆಂಕಟೇಶ್ವರ ಭಟ್ಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಟ ಅಳ್ವ, ಮೊಕ್ತೇಸರರಾದ ಪ್ರದೀಪ್ ಶೆಟ್ಟಿ, ಪರಮೇಶ್ವರ ಸಪಲ್ಯ, ಪ್ರಮುಖರಾದ ಹರೀಶ ಬಂಗೇರ, ಸುರೇಶ ಬಂಗೇರ, ರಾಮ ದೇರಾಜೆ, ಕಿಶನ್ ಸೇನವ, ಭಾಸ್ಕರ ಕಂಪಕೋಡಿ, ಕೇಶವ ಮಡಿವಾಳ, ಅರ್ಚಕರಾದ ನಾಗರಾಜ ಭಟ್ಟರು, ಶಿಲ್ಪಿ ಅಣ್ಣಪ್ಪ ಮುರುಡೇಶ್ವರ ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127


Be the first to comment on "ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಶಿಲಾಮಯ ಕೆಲಸಗಳಿಗೆ ಚಾಲನೆ"