ಮೀಲಾದುನ್ನಬಿ ಪ್ರಯುಕ್ತ ಬಂಟ್ವಾಳ ತಾಲೂಕಿನಾದ್ಯಂತ ರವಿವಾರ ಬೆಳಗ್ಗೆಯಿಂದಲೇ ಸಂಭ್ರಮಾಚರಣೆ ಹಾಗೂ ಸ್ವಲಾತ್ ಮೆರವಣಿಗೆ ಆರಂಭಗೊಂಡಿತು.
ಫರಂಗಿಪೇಟೆ, ಮಾರಿಪಳ್ಳ, ಫಜೀರು, ತುಂಬೆ, ವಳವೂರು, ತಲಪಾಡಿ, ಮಿತ್ತಬೈಲ್, ಶಾಂತಿಅಂಗಡಿ, ಗೂಡಿನಬಳಿ ಬಿ.ಸಿ.ರೋಡ್, ಕೈಕಂಬ, ಕೆಳಗಿನಪೇಟೆ, ನಂದಾವರ, ಪಾಣೆಮಂಗಳೂರು, ಗುಡ್ಡೆಯಂಗಡಿ, ಸಜೀಪನಡು, ವಿಟ್ಲ ಭಾಗಗಳಲ್ಲಿ ಸೇರಿದಂತೆ ಮೊದಲಾದೆಡೆಗಳಲ್ಲಿ ಮೀಲಾದ್ ರ‍್ಯಾಲಿ ನಡೆದವು.
ನುಸುರತ್ ಮೀಲಾದುನ್ನಬಿ ಸಂಘ ಶಾಂತಿಅಂಗಡಿ ಇದರ ೨೬ ನೇ ವಾರ್ಷೀಕೋತ್ಸವ ಹಾಗೂ ಮೀಲಾದುನ್ನಬಿ ಕಾರ್ಯಕ್ರಮ ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಮಿತ್ತಬೈಲ್ ಖತೀಬ್ ಅಶ್ರಫ್ ಫೈಝಿ ಕೊಡಗು ಧ್ವಜಾರೋಹಣ ನೆರವೇರಿಸಿದರು. ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ದುಆಃ ನೆರವೇರಿಸಿದರು. ಮಸೀದಿ ಅಧ್ಯಕ್ಷ ಹಮೀದ್ ಹಾಜಿ ಎ.ಕೆ., ಕಾರ್ಯದರ್ಶಿ ಸಲಾಂ ಬೀರೂರು, ನುಸುರತ್ ಗೌರವಧ್ಯಕ್ಷ ಹಮೀದ್ ಪಲ್ಲ, ನುಸುರತ್ ಅಧ್ಯಕ್ಷ ಹಮೀದ್ ಜಿ.ಕೆ. ಆಡಳಿತ ಹಾಗೂ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.
ಸಜೀಪನಡು
ತಲಪಾಡಿ:
ಬದ್ರಿಯಾ ಜುಮಾ ಮಸೀದಿ ಹಾಗೂ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಮಸೀದಿ ಖತೀಬರಾದ ಯಾಕೂಬ್ ಫೈಝಿ ಅವರು ಮೀಲಾದುನ್ನಬಿ ಕುರಿತು ಪ್ರಸ್ತಾವನೆಗೈದರು. ಮಸೀದಿ ಆಡಳಿತ ಮಂಡಳಿಯ ಆರ್.ಕೆ. ಅಬೂಬಕರ್, ಇದಿನಬ್ಬ ಕೆಸ್ಸಾರ್ಟಿಸಿ, ಇದಿನಬ್ಬ, ಬಿ.ಸಿ.ಲತೀಫ್, ಆದಂ ಬಿಎಂಟಿ, ಮುಹಮ್ಮದ್ ಪುತ್ತೊನ್ ಮೋನು, ಫಾರೂಕ್, ಅಬ್ದುಲ್ ರಝಾಕ್ ದಾರಿಮಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಶಾಹುಲ್ ಹಮೀದ್ ಉಪಸ್ಥಿತರಿದ್ದರು. ಅನ್ವರ್ ಕೆ.ಎಚ್. ನಿರೂಪಿಸಿದರು.
ಆಲಡ್ಕ:
ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಸ್ವಲಾತ್ ಆಲಡ್ಕ ಮಸೀದಿಯಿಂದ ಹೊರಟ ಮೆರವಣಿಗೆ ನಂದಾವರ, ಮಾರ್ನಬೈಲ್, ಮೆಲ್ಕಾರ್ ಮಾರ್ಗವಾಗಿ ಸಾಗಿ ಬಂದು ಮತ್ತೆ ಆಲಡ್ಕ ಮಸೀದಿ ಸಮೀಪ ಸಮಾಪ್ತಿಗೊಂಡಿತು.
ಪಾಣೆಮಂಗಳೂರು:
ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಸ್ವಲಾತ್ ಮೆರವಣಿಗೆಯನ್ನು ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಅವರು ಮಸೀದಿ ಅಧ್ಯಕ್ಷ ಉಮರ್ ಹಾಜಿ ದೆಂಜಿಪ್ಪಾಡಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನಡೆದ ರ‍್ಯಾಲಿಯು ಆಲಡ್ಕ ಮಸೀದಿಯಿಂದ ಹೊರಟು ಬಂಗ್ಲೆಗುಡ್ಡೆ ಸಾಗಿ ಬಳಿಕ ಅಲ್ಲಿಂದ ಮೆಲ್ಕಾರ್ ಮಾರ್ಗವಾಗಿ ಗುಡ್ಡೆಅಂಗಡಿ ತಲುಪಿ ಅಲ್ಲಿಂದ ಮರಳಿ ಆಲಡ್ಕದಲ್ಲಿ ಸಮಾಪ್ತಿಗೊಂಡಿತು.
ಗುಡ್ಡೆಅಂಗಡಿ:
ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಸ್ವಲಾತ್ ಮೆರವಣಿಗೆ ಭಾನುವಾರ ನಡೆಯಿತು. ಪುರಸಭಾ ಸದಸ್ಯ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಸೀದಿ ಖತೀಬ್ ಹಂಝ ಫೈಝಿ, ಮಸೀದಿ ಅಧ್ಯಕ್ಷ ಎಸ್. ಮುಹಮ್ಮದ್, ಪದಾಧಿಕಾರಿಗಳಾದ ಅಬ್ದುಲ್ ಹಮೀದ್, ಉಮರ್ ಫಾರೂಕ್, ಹನೀಫ್, ಮಜೀದ್ ಮೇಸ್ತ್ರಿ, ಅಬೂಬಕ್ಕರ್ ಮೆಲ್ಕಾರ್, ಮದ್ರಸ ಮುಖ್ಯ ಶಿಕ್ಷಕ ಶರೀಫ್ ಮುಸ್ಲಿಯಾರ್, ಮದ್ರಸ ಅಧ್ಯಾಪಕರಾದ ಅಬ್ಬಾಸ್ ಮುಸ್ಲಿಯಾರ್, ಸೈದಾಲಿ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು. ಸ್ವಲಾತ್ ಮೆರವಣಿಗೆಯು ಗುಡ್ಡೆಅಂಗಡಿ ಮಸೀದಿಯಿಂದ ಹೊರಟು ಮೆಲ್ಕಾರ್ ಮಾರ್ಗವಾಗಿ ಆಲಡ್ಕ, ಬಳಿಕ ಅಲ್ಲಿಂದ ವಾಪಾಸು ಬೋಗೋಡಿ ಮಾರ್ಗವಾಗಿ ಗುಡ್ಡೆಅಂಗಡಿಯಲ್ಲಿ ಸಮಾಪ್ತಿಗೊಂಡಿತು.
ನಂದಾವರ:
ನಂದಾವರ ಕೇಂದ್ರ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸದ ಎಸ್‌ಕೆಎಸ್‌ಬಿವಿ ವತಿಯಿಂದ ಮೀಲಾದ್ ಮೆರವಣಿಗೆ ನಂದಾವರದಿಂದ ಮಾರ್ನಬೈಲುವರೆಗೆ ಸಾಗಿ ಮರಳಿ ನಂದಾವರ ಮಸೀದಿ ಬಳಿ ಸಮಾಪ್ತಿಗೊಂಡಿತು. ಮಸೀದಿ ಅಧ್ಯಕ್ಷ ಬಶೀರ್ ನಂದಾವರ, ಖತೀಬ್ ಅಬ್ದುಲ್ ಮಜೀದ್ ದಾರಿಮಿ, ಮಜೀದ್ ಫೈಝಿ ನಂದಾವರ, ಶರೀಫ್ ಮಲ್ಪೆ, ಆರಿಫ್ ನಂದಾವರ ಮೊದಲಾದವರು ಭಾಗವಹಿಸಿದ್ದರು.
ಗೂಡಿನಬಳಿ:
ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಸ್ವಲಾತ್ ಮೆರವಣಿಗೆ ಭಾನುವಾರ ನಡೆಯಿತು. ಮಸೀದಿ ಬಳಿಯಿಂದ ಹೊರಟ ಮೆರವಣಿಗೆ ಬಿ.ಸಿ. ರೋಡು ಮುಖ್ಯ ವೃತ್ತದಿಂದ ಬಂಟ್ವಾಳ ಕೆಳಗಿನಪೇಟೆ ವರೆಗೆ ಸಾಗಿ ಮರಳಿ ಗೂಡಿನಬಳಿಯಲ್ಲಿ ಸಮಾಪ್ತಿಗೊಂಡಿತು.
ಬಂಟ್ವಾಳ-ಕೆಳಗಿನಪೇಟೆ:
ಬಂಟ್ವಾಳ-ಕೆಳಗಿನಪೇಟೆ ಜುಮಾ ಮಸೀದಿ ಹಾಗೂ ಮನಾರುಲ್ ಇಸ್ಲಾಂ ಮದ್ರಸ ವತಿಯಿಂದ ಈದ್ ಮಿಲಾದ್ ರ‍್ಯಾಲಿ ನಡೆಯಿತು. ರ‍್ಯಾಲಿಯಲ್ಲಿ ಮಸೀದಿ ಖತೀಬ್ ಉಸ್ಮಾನ್ ದಾರಿಮಿ, ಪುರಸಭಾ ಸದಸ್ಯ ಮೂನಿಶ್ ಅಲಿ ಅಹ್ಮದ್, ಅಬ್ದುಲ್ ಖಾದರ್ ಮಾಸ್ಟರ್, ಸಗೀರ್ ಅಹ್ಮದ್, ಹಾರೂನ್ ರಶೀದ್ ಮೊದಲಾದವರು ಭಾಗವಹಿಸಿದ್ದರು.
ಸಜೀಪನಡು:
ಬಂಟ್ವಾಳ ತಾಲೂಕಿನ ಸಜೀಪನಡು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ. ಅಬ್ದುಲ್ ರಝಾಕ್ ರವರ ನೇತೃತ್ವದಲ್ಲಿ ಸಂಭ್ರಮದ ಮೀಲಾದುನ್ನಬಿ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾರಂಭದಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಸಮಿತಿಯ ಅಧ್ಯಕ್ಷ ಹಾಜಿ. ಎಸ್ ಅಬ್ಬಾಸ್ ಸಜೀಪ, ಮಂಗಳೂರಿನ ಬದ್ರಿಯಾ ಜುಮಾ ಮಸೀದಿಯ ಕತೀಬರಾದ ಶೇಖಬ್ಬ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಎಸ್.ಮುಹಮ್ಮದಾಲಿ, ಕೇಂದ್ರ ಜಮಾಅತ್ ಸಮೀತಿಯ ಪ್ರಧಾನ ಕಾರ್ಯದರ್ಶಿಯಾದ ಎಸ್.ಕೆ ಮುಹಮ್ಮದ್, ಉಪಾಧ್ಯಕ್ಷ ಆಶಿಫ್ ಕುನ್ನಿಲ್ ಹಾಗೂ ಇನ್ನಿತರ ಉಲಮಾ ಹಾಗೂ ಉಮರಾಗಳು ಪಾಲ್ಗೊಂಡಿದ್ದರು.
ನಂತರ ಕೇಂದ್ರ ಜುಮಾ ಮಸೀದಿಯ ಮುದರ್ರಿಸರಾದ ಅಬೂಸ್ವಾಲಿಹ್ ಫೈಝಿಯವರು ದುವಾ ಮಾಡುವುದರೊಂದಿಗೆ ಮೀಲಾದ್ ರ‍್ಯಾಲಿಗೆ ಚಾಲನೆಯನ್ನು ನೀಡಿದರು, ಮೀಲಾದ್ ರ‍್ಯಾಲಿಯು ಸಜೀಪದ ರಾಜ ಮಾರ್ಗದಲ್ಲಿ ಸಾಗಿ ಸಜೀಪ ಜಂಕ್ಷನ್ ವರೇಗೂ ನಡೆಯಿತು
Be the first to comment on "ಮೀಲಾದುನ್ನಬಿ – ತಾಲೂಕಿನಾದ್ಯಂತ ಆಚರಣೆ, ಸ್ವಲಾತ್ ಮೆರವಣಿಗೆ"