ಆರು ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ನ.೮ರಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. ಹೇಳಿದ್ಧಾರೆ.
ಗಡಿಯಾರದಲ್ಲಿರುವ ನೀರು ಸಂಗ್ರಹಣಾ ಮತ್ತು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಯೋಜನೆ ಪ್ರಗತಿ ಹಂತದಲ್ಲಿ ೨.೭೨ ಕೋಟಿ ರೂ ಕೊರತೆ ಅನುದಾನವನ್ನು ಸಂಬಂಧಪಟ್ಟ ಸಚಿವರ ಬಳಿ ಮಾತುಕತೆ ನಡೆಸಿ ಮಂಜೂರು ಮಾಡಿಸಲಾಗಿದೆ ಎಂದ ಅವರು, ಹೆಚ್ಚುವರಿ ಜನವಸತಿ ಇರುವ ಗ್ರಾಮಗಳನ್ನೂ ಸೇರಿಸಲಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗ ಸಹಾಯಕ ಕಾ.ನಿ. ಇಂಜಿನಿಯರ್ ಮಹೇಶ್, ಜ್ಯೂ.ಇಂಜಿನಿಯರ್ ಜಗದೀಶ್, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಮಾಣಿ ಗ್ರಾ.ಪಂ.ಸದಸ್ಯ ನಾರಾಯಣ ಶೆಟ್ಟಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ, ಕಡೇಶ್ವಾಲ್ಯ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಶೆಟ್ಟಿ, ಗಣ್ಯರಾದ ವಿಧ್ಯಾದರ ರೈ ಕಡೇಶ್ವಾಲ್ಯ, ಬಿ. ದೇವದಾಸ ಶೆಟ್ಟಿ, ಗಣೇಶ್ ರೈ ಮಾಣಿ, ಪುಷ್ಪರಾಜ ಶೆಟ್ಟಿ, ಹಿರಿಯ ಸಹಕಾರಿ ನಾರಾಯಣ ಸಪಲ್ಯ ಮತ್ತು ಪ್ರಮುಖರು ಉಪಸ್ಥಿತರಿದ್ದರು.
www.bantwalnews.com Editor: Harish Mambady For Advertisements Contact: 9448548127
Be the first to comment on "ಮಾಣಿ ಬಹುಗ್ರಾಮ ಯೋಜನೆ ಸ್ಥಳಕ್ಕೆ ಶಾಸಕ ಭೇಟಿ"