ಡಾ. ಧರಣೀದೇವಿ ಸಮ್ಮೇಳನಾಧ್ಯಕ್ಷೆ, ಪೂರ್ವಭಾವಿ ಸಭೆಯಲ್ಲಿ ಆಯ್ಕೆ ಪ್ರಕಟ
ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ. 28 ಮತ್ತು 29 ರಂದು ಮಾಣಿ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಯಲಿದ್ದು ಇದರ ಪೂರ್ವ ಭಾವಿ ಸಭೆ ಶಾಲಾ ಸಭಾಭವನದಲ್ಲಿ ಶನಿವಾರ ನಡೆಯಿತು.

ಅದ್ಯಕ್ಷತೆ ವಹಿಸಿದ್ದ ಬಂಟ್ವಾಳ ಕ.ಸಾ.ಪ ಅಧ್ಯಕ್ಷ ಕೆ. ಮೋಹನ ರಾವ್ ಅವರು ಸಮ್ಮೇಳನದ ಅಧ್ಯಕ್ಷೆಯಾಗಿ ಐಪಿಎಸ್ ಅಧಿಕಾರಿ, ಸಾಹಿತಿ ಧರಣಿದೇವಿ ಮಾಲಗತ್ತಿ ಹೆಸರನ್ನು ಘೋಷಿಸಿದರು.

ಡಾ. ಧರಣೀದೇವಿ ಮಾಲಗತ್ತಿ
ಮಾಣಿ ಬಾಲವಿಕಾಸ ಶಾಲಾ ಸಂಚಾಲಕ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಜಡ್ತಿಲ ಪ್ರಹ್ಲಾದ ಶೆಟ್ಟಿ , ಜಿ.ಪಂ.ಸದಸ್ಯೆ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾದ್ಯಕ್ಷೆ ಮಂಜುಳ ಮಾವೆ, ಸಮ್ಮೇಳನ ಸ್ವಾಗತ ಸಮಿತಿ ನಿಕಟಪೂರ್ವ ಅದ್ಯಕ್ಷ ಕೆ.ಎನ್. ಗಂಗಾಧರ ಆಳ್ವ, ತಾ.ಪಂ.ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಿತಿ ಕೋಶಾಧಿಕಾರಿ ಜಗನ್ನಾಥ ಚೌಟ, ಕ.ಸಾ.ಪ ಕಾರ್ಯದರ್ಶಿ ನಾಗವೇಣಿ ಮಂಚಿ, ಬಂಟ್ವಾಳ ತಾಲೂಕು ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಮಾಣಿ ಗ್ರಾ.ಪಂ. ಅಧ್ಯಕ್ಷೆ ಮಮತಾ ಶೆಟ್ಟಿ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮಾಣಿ, ಸಚಿನ ರೈ ಮಾಣಿಗುತ್ತು ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಶ್ರೀಧರ. ಸಿ ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ ವಂದಿಸಿದರು. ಸ್ವಾಗತ ಸಮಿತಿ ಜೊತೆ ಕಾರ್ಯದರ್ಶಿ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
www.bantwalnews.com Editor: Harish Mambady For Advertisements Contact: 9448548127


Be the first to comment on "ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ"