ಜೈನ್ ಮಿಲನ್ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಜಿನ ಭಜನಾ ಸ್ಪರ್ಧೆ, ಪರ್ಬದ ಪುದ್ದರ್, ಭವ್ಯ ಸ್ಮರಣಾಂಜಲಿ, ದೀಪಾವಳಿ ಆಚರಣೆ ಹಾಗೂ ನೂತನ ಯುವ ಜೈನ್ ಮಿಲನ್ ಪದಾಧಿಕಾರಿಗಳ ಪದಗ್ರಹಣ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಮಿಲನ್ ಬಂಟ್ವಾಳ ಅಧ್ಯಕ್ಷ ಡಾ. ಸುದೀಪ್ ಕುಮಾರ್ ಸಿದ್ದಕಟ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.
ಜೈನ್ ಮಿಲನ್ ಮಂಗಳೂರು ವಿಭಾಗ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಭಜನೆ ಭಗವತ್ ಭಕ್ತರನ್ನು ಒಂದಾಗಿಸುತ್ತದೆ. ಇಂದು ಭಾಗವಹಿಸಿದ ಎಲ್ಲ ತಂಡಗಳು ಮುಂದಕ್ಕೆ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಲು ಪೂರ್ವ ತಯಾರಿ ನಡೆಸಬೇಕು. ಮಹಿಳೆಯರು ಕೂಡಾ ಇದರಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಉಡುಪಿ ಜೈನ್ ಮಿಲನ್ ಅಧ್ಯಕ್ಷ ಸುಧೀರ್ ಕುಮಾರ್ ವೈ, ಮಂಗಳೂರು ವಿಭಾಗದ ವಲಯ ನಿರ್ದೇಶಕ ಧನ್ಯ ಕುಮಾರ್ ರೈ ಶುಭ ಹಾರೈಸಿದರು. ಬಂಟ್ವಾಳ ಶ್ರೀ ಅದಿನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ ೪೮ ವರ್ಷಗಳ ಪರ್ಯಂತ ಪುರೋಹಿತರಾಗಿ ಸೇವೆ ಸಲ್ಲಿಸಿದ ಅನಂತರಾಜ ಇಂದ್ರ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ. ಮಾಜಿ ಸದಸ್ಯೆ ರಾಜಶ್ರೀ ಎಸ್. ಹೆಗ್ಡೆ, ಸುಧೀರ್ ಕುಮಾರ್ ವೈ, ಪ್ರ.ಕಾರ್ಯದರ್ಶಿ ಸುಭಾಶ್‌ಚಂದ್ರ ಜೈನ್, ಕಾರ್ಯದರ್ಶಿ ಜಯಕೀರ್ತಿ ಉಪಸ್ಥಿತರಿದ್ದರು.
ಭಜನಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ೨೨ ಮಂದಿ, ಹಿರಿಯರ ವಿಭಾಗದ ೨೧ ಮಂದಿ ಭಾಗವಹಿಸಿದರು. ತೀರ್ಪುಗಾರರಾಗಿ ಭಗವಾನ್ ದಾಸ್, ಜಿತೇಂದ್ರ ಜೈನ್ ಬೆಂಗಳೂರು, ಚಂದನಾ ಬೃಜೇಶ್ ಬಾಳ್ತಿಲ ಸಹಕರಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮೀಕ್ಷಾ ಪ್ರಾರ್ಥನೆ ನೆರವೇರಿಸಿದರು. ಸನ್ಮತಿ ಜಯಕೀರ್ತಿ ಸ್ವಾಗತಿಸಿ, ಯುವ ಜೈನ್ ಮಿಲನ್ ಕಾರ್ಯದರ್ಶಿ ಸಮೀಕ್ಷಾ ಜೈನ್ ವಂದಿಸಿದರು. ಆದಿರಾಜ ಜೈನ್ ಕೊಯಕ್ಕುಡೆ ಮತ್ತು ಉದಯ ಕುಮಾರ್ ಮದ್ವ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳ ತಾಲೂಕು ಮಟ್ಟದ ಜಿನಭಜನಾ ಸ್ಪರ್ಧೆ"