ಸವರ್ಣ ದೀರ್ಘ ಸಂಧಿ – 18ರಂದು ತೆರೆಗೆ

ವೀರು ಟಾಕೀಸ್ ಮತ್ತು ಲೈಲಾಕ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಸವರ್ಣದೀರ್ಘ ಸಂಧಿ ಸಿನಿಮಾವು ಇದೇ ಅಕ್ಟೋಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ತುಳು ಸಿನಿಮಾ ’ಚಾಲಿಪೋಲಿಲು’ ಖ್ಯಾತಿಯ ನಿರ್ದೇಶಕ ವೀರೇಂದ್ರ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾದಲ್ಲಿ ಹಿರಿಯ ನಟಿ ವಿನಯಪ್ರಸಾದ್ ಅವರ ಸಹೋದರನ ಮಗಳಾದ ಕೃಷ್ಣಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ (ಪಿವಿಆರ್), ಮನೋಮೂರ್ತಿ, ವೀರೇಂದ್ರ ಶೆಟ್ಟಿ ಸೇರಿದಂತೆ ನಾಲ್ಕು ಜನ ನಿರ್ಮಾಪಕರನ್ನು ಹೊಂದಿರುವ ಈ ಸಿನಿಮಾಗೆ ಮನೋಮೂರ್ತಿ ಸಂಗೀತವಿದೆ. ಶಂಕರ್ ಮಹದೇವನ್, ಶ್ರೇಯಾ ಘೋಷಾಲ್ , ಶಶಿಕಲಾ ಸುನೀಲ್, ವಿಧಿಷಾ ವಿಶ್ವಾಸ್ ಹಿನ್ನೆಲೆ ಗಾಯನ ಈ ಚಿತ್ರಕ್ಕಿದೆ.

ಉಸ್ತಾದ್ ಹೋಟೆಲ್ ಖ್ಯಾತಿಯ ಛಾಯಾಗ್ರಾಹಕ ಲೋಗನಾಥನ್ ಶ್ರೀನಿವಾಸನ್ ಕ್ಯಾಮಾರ ಈ ಸಿನಿಮಾಕ್ಕಿದೆ. ಸಂಕೇತ್ ಶಿವಪ್ಪ ಸಂಕಲನ ಮಾಡಿದ್ದಾರೆ. ಆನೇಕಲ್, ಜಿಗಣಿ, ದೇವರಾಯನ ದುರ್ಗಾ, ಮೂಡಿಗೆರೆ, ಮತ್ತು ಬೆಂಗಳೂರು ಆಸುಪಾಸು ಚಿತ್ರೀಕರಣ ನಡೆದಿದೆ.

ವೀರೇಂದ್ರ ಶೆಟ್ಟಿ, ಕೃಷ್ಣಾ, ರವಿಭಟ್, ಕೃಷ್ಣ ನಾಡಿಗ್, ಪದ್ಮಜ ಸುರೇಂದ್ರ ಬಂಟ್ವಾಳ, ನಿರಂಜನ್ ದೇಶಪಾಂಡೆ, ರವಿ ಮಂಡ್ಯ, ಅಜಿತ್ ಹನಮಕ್ಕನವರ್ , ಅಲ್ವಿನ್ ಸಚಿನ್ ಡಿಸೋಜ, ಅವಿನಾಶ್ ನೀನಾಸಂ, ದತ್ತಾತ್ರೇಯ ಕುರಹಟ್ಟಿ, ರಾಮರಾವ್, ಸಂಕೇತ್ ಶಿವಪ್ಪ, ಪ್ರಣವ್ ಮೂರ್ತಿ, ಅಪ್ರಮೆಯ, ರಾಘು ಕಲಾವಿದ, ವಿಕ್ಕಿ, ಮಧುಸೂದನ್, ಮಧು ಭಾರದ್ವಾಜ್, ಎಲಿಜಬೆತ್ ಥಾಮಸ್ ಮುಂತಾದವರು ತಾರಾಗಣದಲ್ಲಿದ್ದಾರೆ. ನಿರ್ದೇಶನ-ಕಥೆ-ಚಿತ್ರಕಥೆ-ಸಂಭಾಷಣೆ: ವೀರೇಂದ್ರ ಶೆಟ್ಟಿ ಕಾವೂರು.

www.bantwalnews.com Editor: Harish Mambady For Advertisements Contact: 9448548127

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ.
  

  

Be the first to comment on "ಸವರ್ಣ ದೀರ್ಘ ಸಂಧಿ – 18ರಂದು ತೆರೆಗೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*