ಕರ್ನಾಟಕ ಮುಸ್ಲಿಂ ಜಮಾಅತ್ ನ ಬಂಟ್ವಾಳ ತಾಲೂಕು ಸಮಿತಿಯ ರಚನಾ ಸಮಾವೇಶವು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಬಂಟ್ವಾಳ ತಾಲೂಕಿನ ಸರ್ವ ಮಸೀದಿಗಳ ಮುಖ್ಯಸ್ಥರು, ತಾಲೂಕಿನ ಪ್ರಮುಖ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮುಖಂಡರು ಭಾಗವಹಿಸಿದ ಸಮಾವೇಶವನ್ನು ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ. ಶಾಫಿ ಸಅದಿ ಮುಖ್ಯ ಭಾಷಣ ಮಾಡಿದರು. ಸಂಸ್ಥೆಯ ಜಿಲ್ಲಾ ಕಾರ್ಯಾಧ್ಯಕ್ಷ ಎಸ್ಸೆಂ ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದರು. ಅಬೂಸುಫಿಯಾನ್ ಮದನಿ, ಅಬ್ದುರ್ರಶೀದ್ ಝೈನಿ ಕಾಮಿಲ್, ಮುಮ್ತಾಝ್ ಅಲಿ ಕೃಷ್ಣಾಪುರ ಮಾತನಾಡಿದರು.
ಎಸ್.ಕೆ.ಅಬ್ದುಲ್ ಖಾದರ್ ಹಾಜಿ ಮುಡಿಪು, ಇಬ್ರಾಹಿಂ ಫೈಝಿ ಕನ್ಯಾನ, ಅಬೂಬಕರ್ ಫೈಝಿ, ಮಹಮ್ಮದಲಿ ಸಖಾಫಿ ಅಶ್ಅರಿಯ್ಯ, ಸಿರಾಜ್ ಸಖಾಫಿ ಕನ್ಯಾನ, ಹಂಝ ಮದನಿ ಮಿತ್ತೂರು, ಅಶ್ರಫ್ ಕಿನಾರ, ರಫೀಕ್ ಹಾಜಿ ತೌಫೀಕ್, ಬಶೀರ್ ಹಾಜಿ ಸಂಪ್ಯ, ರಝಾಕ್ ಹಾಜಿ ಪಾಣೆಮಂಗಳೂರು, ಡಾ.ಶರೀಫ್ ಪಾಣೆಮಂಗಳೂರು, ಹಮೀದ್ ಹಾಜಿ ಕೊಡುಂಗಾಯಿ ಮೊದಲಾದವರು ಉಪಸ್ಥಿತರಿದ್ದರು. ಅನ್ವರ್ ಹುಸೈನ್ ಪಾಣೆಮಂಗಳೂರು ಸ್ವಾಗತಿಸಿದರು. ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷರಾಗಿ ರಫೀಕ್ ಹಾಜಿ ತೌಫೀಕ್, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಹುಸೈನ್ ಗೂಡಿನಬಳಿ, ಕೋಶಾಧಿಕಾರಿಯಾಗಿ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಉಪಾಧ್ಯಕ್ಷರಾಗಿ ಸಿ.ಎಚ್. ಮಹಮ್ಮದಲಿ ಸಖಾಫಿ, ಎಸ್.ಕೆ. ಖಾದರ್ ಹಾಜಿ ಮುಡಿಪು, ಅಬ್ದುರ್ರಝಾಕ್ ಹಾಜಿ ಪಾಣೆಮಂಗಳೂರು, ಶೇಖಬ್ಬ ಹಾಜಿ ಕಾರಾಜೆ, ಅಬ್ದುಲ್ ಹಮೀದ್ ಹಾಜಿ ಕೊಡುಂಗೈ, ಸುನ್ನೀ ಫೈಝಿ, ಕಾರ್ಯದರ್ಶಿಗಳಾಗಿ ಮಹಮ್ಮದ್ ಇಸ್ಮಾಯಿಲ್ ಬಂಟ್ವಾಳ, ಎಸ್ಸೆಂ ಬಶೀರ್ ಹಾಜಿ ಬಿ.ಸಿ.ರೋಡ್, ಹೈದರ್ ಹಾಜಿ ಸಜಿಪ, ರಶೀದ್ ವಗ್ಗ, ಶಮೀವುಲ್ಲಾ ಲೆಕ್ಚರರ್, ಬಿ.ಎಂ.ತುಂಬೆ, ಸಂಘಟನಾ ಕಾರಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಕೋರ್ಡಿನೇಟರಾಗಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಹಾಗೂ 16 ಮಂದಿ ಕಾರ್ಯಕಾರೀ ಸಮಿತಿ ಸದಸ್ಯರು ಆಯ್ಕೆಯಾದರು. ತಾಲೂಕಿನ 7 ಬ್ಲಾಕ್ ಗಳ ಕೋರ್ಡಿನೇಟರ್ ಗಳನ್ನು ಈ ಸಂದರ್ಭ ಆರಿಸಲಾಯಿತು.
Be the first to comment on "ಬಂಟ್ವಾಳ ಮುಸ್ಲಿಂ ಜಮಾಅತ್ ಅಸ್ತಿತ್ವಕ್ಕೆ"