ಸರ್ವರ್ ಸಮಸ್ಯೆ, ಡೆಂಘೆ ಕಾಟ, ಸವಲತ್ತುಗಳ ಹಂಚಿಕೆ, ಪೂರ್ವಮಾಹಿತಿ, ಅಧಿಕಾರಿಗಳ ಗೈರು ಹೀಗೆ ಬಂಟ್ವಾಳ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸಜಿಪನಡು ಗ್ರಾಮ ಪಂಚಾಯತ್‌ನ ಗ್ರಾಮ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶ ಕಾರ್ಯಕ್ರಮ) ಸೇರಿದಂತೆ ಮೊದಲ ಕೆಡಿಪಿ ಸಭೆಯಲ್ಲಿ ಹಲವು ವಿಷಯಗಳ ಚರ್ಚೆ ಸೋಮವಾರ ನಡೆಯಿತು.
ಪ್ರಮುಖ ಇಲಾಖೆಗಳು ಗೈರು ಹಾಜರಿಯ ಬಗ್ಗೆ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಜಿಪ ಅಸಮಾಧಾನ ವ್ಯಕ್ತಪಡಿಸಿ, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ಪತ್ರ ಬರೆದು ಗಮನ ತರುವಂತೆ ಪಿಡಿಒ ಅವರಿಗೆ ಸೂಚಿಸಿದರು.
ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ಪಡಿತರ ಸಾಮಗ್ರಿಗಳನ್ನು ಪಡೆಯಲು ಅಲೆದಾಡುವ ಸಂದರ್ಬ ಉಂಟಾಗುತ್ತಿದ್ದು, ಆಗ ಪಡಿತರದಾರರು ನಮ್ಮ ಮೇಲೆಯೇ ರೇಗಿ ಬೀಳುತ್ತಿದ್ದಾರೆ ಎಂದು ನ್ಯಾಯಬೆಲೆ ಅಂಗಡಿಗಳ ಮಾಲಿಕರು ಸಭೆಗೆ ದೂರಿಕೊಂಡರು.
ತೂಕ ಹಾಗೂ ಸಮಯ ಪರಿಪಾಲನೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಬಗ್ಗೆ ತಾವು ಗಮನ ಹರಿಸುವಂತೆ ಅಧ್ಯಕ್ಷ ನಾಸಿರ್ ಸಜಿಪ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಸೂಚಿಸಿದರು.
ಜಂತುಹುಳ ನಿವಾರಣಾ ಅಭಿಯಾನದ ಪ್ರಯುಕ್ತ ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳ ನಿವಾರಣಾ ವಿತರಿಸಲಾಗುತ್ತಿದೆ. ಆದರೆ, ಮಾತ್ರೆ ವಿತರಣೆಯ ಬಗ್ಗೆ ಕೆಲ ಪೋಷಕರಿಗೆ ಅನುಮಾನಗಳಿವೆ. ಈ ಬಗ್ಗೆ ಯಾವುದೇ ಆತಂಕಗಳು ಬೇಡ. ಈ ಮಾತ್ರೆಯನ್ನು ಮಕ್ಕಳೂ ಖಡ್ಡಾಯ ಸೇವಿಸಬೇಕು. ಊಈ ನಿಟ್ಟಿನಲ್ಲಿ ಪಂಚಾಯುತ್ ವತಿಯೀಮದ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದು ಆರೋಗ್ಯ ಸಹಾಯಕಿ ಅವರು ಅಧ್ಯಕ್ಷರಲ್ಲಿ ಕೋರಿದರು.
ಗ್ರಾಮಕರಣಿಕ ಪ್ರಕಾಶ್ ವಿವಿಧ ಮಾಹಿತಿ ನೀಡಿದರು. ಸಜೀಪನಡು ಗ್ರಾಮದಲ್ಲಿ ಮೂರು ಶಂಕಿತ ಡೆಂಗೆ ಪ್ರಕರಣಗಳು (ಎಪ್ರಿಲ್-ಸೆಪ್ಟಂಬರ್) ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಸ್ವಚ್ಛತಾ ಕಾರ್ಯ ಹಾಗೂ ಪಾಂಗಿಂಗ್ ಮಾಡಲಾಗಿದೆ. ಎಂದು ಪ್ರಾಥಮಿಕ ಆರೋಗ್ಯ ಇಲಾಖೆ ಆರೋಗ್ಯ ಸಹಾಯಕಿ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷತೆ ಸುನಿತಾ ಶಾಂತಿ ಮೋರೆಸ್, ಸಿಬ್ಬಂದಿ ಮುಝಮ್ಮಿಲ್, ಅಬ್ದುಲ್ ರಹ್ಮಾನ್ ಹಾಜರಿದ್ದರು. ಪಿಡಿಒ ಶಿವಗೊಂಡಪ್ಪ ಬಿರಾದಾರ್ ಸ್ವಾಗತಿಸಿ, ವಂದಿಸಿದರು.
Be the first to comment on "ಗ್ರಾಮಮಟ್ಟದಲ್ಲಿ ನಡೆಯಿತು ಕೆಡಿಪಿ ಸಭೆ, ಸರ್ವರ್ ಸಮಸ್ಯೆ ಪ್ರತಿಧ್ವನಿ"