ಬಂಟ್ವಾಳ ತುಳುಕೂಟದ ವತಿಯಿಂದ ನವಂಬರ್ 24ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ತಾಲೂಕು ಮಟ್ಟದ ತುಳು ನೃತ್ಯ ಭಜನಾ ಸ್ಪರ್ಧೆಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಬುಧವಾರ ಎಲ್ .ಡಿ.ಬ್ಯಾಂಕು ಸಭಾಂಗಣದಲ್ಲಿ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಭಜನಾ ಸ್ಪರ್ಧೆಯ ಸಂಯೋಜನೆಗಾಗಿ ಮಂಜು ವಿಟ್ಲ, ರಾಜಾ ಬಂಟ್ವಾಳ, ಅಶೋಕ ಶೆಟ್ಟಿ ಸರಪಾಡಿ, ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ದಿವಾಕರದಾಸ್ ಕಾವಳಕಟ್ಟೆ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ತುಳುವನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ನವಂಬರ್ 16 ರಂದು ತುಳು ಸ್ಪರ್ಧೆ:
ತುಳುಕೂಟದ ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ನವಂಬರ್ 16 ರಂದು ಸ್ಪರ್ಶಾ ಕಲಾ ಮಂದಿರದಲ್ಲಿ ತುಳು ಕತೆ ಹೇಳುವುದು ಹಾಗೂ ತುಳು ಗಾಯನ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಲಾಯಿತು. ಸ್ಪರ್ಧೆಯ ಸಂಯೋಜನೆಗಾಗಿ ಕೆ.ರಮೇಶ್ ನಾಯಕ್ ರಾಯಿ, ಗೋಪಾಲ ಅಂಚನ್, ಟಿ.ಶೇಷಪ್ಪ ಮೂಲ್ಯ, ಬಿ.ಸತೀಶ್ ಕುಮಾರ್, ಗಣೇಶ್ ನಾಯಕ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಹಿರಿಯ ಸಾಹಿತಿ, ತುಳು ಲಿಪಿ ಶಿಕ್ಷಕ ಬಿ.ತಮ್ಮಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಂದಿನ ಸಭೆಯನ್ನು ಸೆಪ್ಟೆಂಬರ್ 30-9-2019 ಸೋಮವಾರ ಸಂಜೆ 5 ಗಂಟೆಗೆ ಬಿ.ಸಿ.ರೋಡಿನ ಎಲ್.ಡಿ. ಬ್ಯಾಂಕು ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ಎಲ್ಲಾ ಸದಸ್ಯರು ಹಾಜರಿರುವಂತೆ ಅಧ್ಯಕ್ಷ ಸುದರ್ಶನ್ ಜೈನ್ ವಿನಂತಿಸಿದರು. ತುಳುಕೂಟದ ಕಾರ್ಯದರ್ಶಿ ಎಚ್ಕೆ. ನಯನಾಡು ಸ್ವಾಗತಿಸಿದರು. ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ವಂದಿಸಿದರು.
www.bantwalnews.com ಸಂಪಾದಕ: HARISH MAMBADY
Be the first to comment on "ಬಂಟ್ವಾಳ ತುಳುಕೂಟದ ವತಿಯಿಂದ ತುಳು ನೃತ್ಯ ಭಜನಾ ಸ್ಪರ್ಧೆ"