ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಒಂದು ವೇಳೆ ಸ್ಥಳಾಂತರಗೊಳ್ಳುವುದು ಎಂದಿದ್ದರೆ ಬಂಟ್ವಾಳವೇ ಸೂಕ್ತ ಪ್ರದೇಶ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಪಿ ಅವರ ಕಚೇರಿಯು ಪೂತ್ತೂರಿಗೆ ಸ್ಥಳಾಂತರಿಸುವ ಚರ್ಚೆಯಾಗುತ್ತಿವೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿಗಳಿಗೆ ಬಂಟ್ವಾಳವೇ ಕೇಂದ್ರ ಸ್ಥಾನವಾಗಿದೆ. ಅದಲ್ಲದೆ, ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸರಕಾರವು ಇದೀಗ ಜಾರಿಗೆ ತಂದಿರುವ ಮೋಟಾರು ವಾಹನ ಕಾಯಿದೆಯಡಿಯಲ್ಲಿ ವಾಹನಗಳಿಗೆ ವಿಧಿಸಲಾಗುತಿರುವ ದಂಡದಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತಿವೆ ಎಂದ ಅವರು, ಇದನ್ನು ಸರಳೀಕರಿಸಿಗೊಳಿಸಿ ದಂಡ ಪ್ರಮಾಣವನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ವಾಹನ ಬಿಡಿಭಾಗಗಳನ್ನು ಆಯಾ ಕಂಪನಿಯಲ್ಲಿ ಖರೀದಿರುವ ಸುತ್ತೊಲೆ ಹೊರಡಿಸಿರುವ ಹಿನ್ನೆಲೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಿಂದ ಸ್ಥಳೀಯ ಗ್ಯಾರೇಜ್ ನಲ್ಲಿ ತಯಾರಿಸಿರುವ ವಾಹನಗಳ ಬಿಡಿಭಾಗಗಳಿಗೆ ಬೇಡಿಕೆ ಇಲ್ಲದಂತಾಗುತ್ತದೆ. ಪರಿಣಾಮ ಸಣ್ಣ ಪ್ರಮಾಣ ಗ್ಯಾರೇಜ್ ಗಳು ಮುಚ್ಚುವಂತಹ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ನೂರಾರು ಭಾಷೆಗಳು ನಶಿಸಿ ಹೋಗಿವೆ. ಇದೇ ರೀತಿ ಹಿಂದಿ ಹೇರಿಕೆ ಮುಂದುರಿದರೆ ರಾಜ್ಯದ ಕನ್ನಡ ಭಾಷೆ ಉಳಿಯಲು ಸಾಧ್ಯವೇ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಮಾಣಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಹಾಜರಿದ್ದರು.
Be the first to comment on "ಎಸ್ಪಿ ಕಚೇರಿಗೆ ಬಂಟ್ವಾಳವೇ ಸೂಕ್ತ – ರಮಾನಾಥ ರೈ"