ಚಾರ್ಮಾಡಿ ಘಾಟಿಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದ್ದರೂ ಅದನ್ನು ಈಗ ತೆರವುಗೊಳಿಸಲಾಗಿದೆ. ಶಿರಾಡಿ ರಸ್ತೆಯೂ ಅಪಾಯಮುಕ್ತವಾಗಿಲ್ಲ. ಕೊಡಗಿನಲ್ಲೂ ಮಳೆಯಾಗುತ್ತಿದ್ದು, ಅಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ಘಟ್ಟ ಪ್ರದೇಶದಲ್ಲೂ ಮಳೆಯಾಗುತ್ತಿರುವ ಕಾರಣ ನೇತ್ರಾವತಿ ಯಾವುದೇ ಕ್ಷಣದಲ್ಲೂ ಅಪಾಯದ ಮಟ್ಟದಷ್ಟು ತಲುಪುವ ಸಾಧ್ಯತೆ ಇದೆ. ಭಾರೀ ಗಾಳಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ತಹಶೀಲ್ದಾರ್ ರಶ್ಮಿ ಎಸ್.ಆರ್. ರಜೆ ಘೋಷಣೆ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಅಂಗನವಾಡಿ,ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ರಜೆ ನೀಡುವಂತೆ ಬಂಟ್ವಾಳ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಸೋಮವಾರ ರಾತ್ರಿ 5.8 ಮೀಟರ್ ನಷ್ಟು ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ, ಮಂಗಳವಾರ ಬೆಳಗ್ಗೆ 7.8 ಮೀಟರ್ ತಲುಪಿತ್ತು. ಮಧ್ಯಾಹ್ನದ ವೇಳೆ ಇಳಿಮುಖವಾಗಿದ್ದು, 7.4ರಲ್ಲಿತ್ತು. ಮಟ್ಟ 8.5 ಆಗಿದೆ. ಶಂಭೂರು ಎಎಂಆರ್ ಅಣೆಕಟ್ಟಿನಿಂದ ಹತ್ತು ಗೇಟ್ ಗಳಲ್ಲಿ ನೀರನ್ನು ಹೊರಬಿಡಲಾಗಿದೆ.
Be the first to comment on "ಕರಾವಳಿಯಲ್ಲಿ ಅಬ್ಬರದ ಮಳೆ, ಅಲ್ಲಲ್ಲಿ ಹಾನಿ, ನೆರೆಭೀತಿ"