ಟೋಸ್ಟ್ ಮಾಸ್ಟರ್ ಇಂಟರ್ ನ್ಯಾಶನಲ್ ನ ಬಂಟ್ವಾಳ ಸ್ಪೀಚ್ ವೀವರ್ಸ್ ಕ್ಲಬ್ ಅನ್ನು ಮಂಗಳೂರು ಕೆಎಂಸಿಯ ಹಿರಿಯ ವೈದ್ಯ ಡಾ. ಎಸ್.ಆರ್. ನಾಯಕ್ ಬಂಟ್ವಾಳ ರೋಟರಿ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸ್ಪೀಚ್ ವೀವರ್ಸ್ ಕ್ಲಬ್ ಪರಿಣಾಮಕಾರಿ ಭಾಷಣ ಕಲೆಯನ್ನು ಕರಗತಮಾಡಿಸಲು ಸಹಾಯ ಮಾಡುತ್ತದೆ. ಇನ್ನೊಬ್ಬರ ಮೆಚ್ಚಿಸಲು ಭಾಷಣ ಮಾಡಲು ಹೊರಡಬೇಡಿ. ಮಾತನಾಡುವ ಸಂದರ್ಭ ಏನು ಮಾಡುತ್ತೇವೆ ಎಂಬುದು ಗೊತ್ತಿರಬೇಕು. ನೀವು ಯಾರದ್ದೊ ಮಾತುಗಳನ್ನು ಹೇಳಬೇಡಿ. ಪರಿಣಾಮಕಾರಿ ಭಾಷಣ ಮಾಡುವುದು ಒಂದು ಕಲೆ. ಆದರೆ ಆತ್ಮವಿಶ್ವಾಸ ಇರಲಿ, ಬಳಸುವ ಶಬ್ದಗಳು ಸರಳವಾಗಲಿ ಎಂದು ಸಲಹೆ ನೀಡಿದರು.
ಅಧ್ಯಕ್ಷೆಯಾಗಿ ಪದಗ್ರಹಣ ಸ್ವೀಕರಿಸಿದ ಡಾ.ಶಶಿಕಲಾ ಸೋಮಯಾಜಿ ಮಾತನಾಡಿ, , ಬಂಟ್ವಾಳ ಸ್ಪೀಚ್ ವೀವರ್ಸ ಮತ್ತು ಟೋಸ್ಟ್ ಮಾಸ್ಟರ್ಸ್ ಕ್ಲಬ್ ಪ್ರತಿಭಾನ್ವಿತರ ತಂಡದ ಮೂಲಕ ಕ್ಲಬ್ ಉದ್ದೇಶಗಳನ್ನು ಈಡೇರಿಸಲಿದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಕ್ಲಬ್ ನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಮಾಲಿನಿ ಹೆಬ್ಬಾರ್, ಡಾ. ಒಲಿವರ್ ಡಿಸೋಜ, ವಿಭಾಗೀಯ ನಿರ್ದೇಶಕಿ ಶಿವಾನಿ ಬಾಳಿಗಾ, ಸವಿತಾ ಸಾಲಿಯಾನ್ ಶುಭ ಹಾರೈಸಿದರು. ಪ್ರತಿಭಾ ರೈ ಪ್ರಾರ್ಥಿಸಿದರು. ರಶ್ಮಾ ಆಳ್ವ ಸ್ವಾಗತಿಸಿದರು. ಕ್ಲಬ್ ನ ವಿವಿಧ ಪದಾಧಿಕಾರಿಗಳಾದ ರಿತೇಶ್ ಬಾಳಿಗ, ಪ್ರಕಾಶ್ ಬಾಳಿಗಾ, ಅಹ್ಮದ್ ಮುಸ್ತಾಫಾ, ವಾಣಿ ಕಾರಂತ, ಡಾ. ಭಾರತಿ ಶೆಟ್ಟಿ ಅವರಿಗೆ ಜವಾಬ್ದಾರಿ ಹಂಚಲಾಯಿತು. ಡಾ. ರಮೇಶಾನಂದ ಸೋಮಯಾಜಿ ಮತ್ತುವಿವಿಧ ಘಟಕಗಳ ಪ್ರಮುಖರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಕಾಶ್ ಬಾಳಿಗಾ ವಂದಿಸಿದರು, ಅಹ್ಮದ್ ಮುಸ್ತಾಫಾ ಮತ್ತು ಸ್ಮಿತಾ ಸಲ್ದಾನಾ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಪರಿಣಾಮಕಾರಿ ಭಾಷಣಕ್ಕೆ ಆತ್ಮವಿಶ್ವಾಸ ಅಗತ್ಯ: ಡಾ. ಎಸ್.ಆರ್.ನಾಯಕ್"