ಬಂಟ್ವಾಳ: ಬಂಟ್ವಾಳದಿಂದ ಸೊರ್ನಾಡುವರೆಗಿನ ರಸ್ತೆಯೀಗ ಹೊಂಡದ ಮೇಲಿನ ಸವಾರಿಯಂತಾಗಿದೆ.
ಜಾಹೀರಾತು
ಬಂಟ್ವಾಳದ ತುಂಬ್ಯ ಜಂಕ್ಷನ್ ದಾಟಿದ ಕೂಡಲೇ ಹೊಂಡಗಳ ಸರಮಾಲೆ ಆರಂಭವಾಗುತ್ತದೆ. ಎಸ್. ವಿ.ಎಸ್. ಕಾಲೇಜು, ಹೈಸ್ಕೂಲು, ಹಾಸ್ಟೆಲುಗಳ ಮುಂಭಾಗ ಬೃಹತ್ ಹೊಂಡಗಳಿದ್ದು, ಅಧಿಕಾರಿಗಳು ಕೇವಲ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ, ರಿಪೇರಿ ಗೋಜಿಗೇ ಹೋಗುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಕಾಲೇಜು ದಾಟಿ ಗುಡ್ಡದ ರಸ್ತೆಯಲ್ಲಿ ಲೊರೆಟ್ಟೊ ಚರ್ಚ್ ತಲುಪುವ ವೇಳೆಗೆ ಇಪ್ಪತ್ತಕ್ಕೂ ಹೆಚ್ಚು ಸಣ್ಣ, ದೊಡ್ಡ ಗುಂಡಿಗಳನ್ನು ತಪ್ಪಿಸಬೇಕಾಗುತ್ತದೆ ಸೊರ್ನಾಡು ರಸ್ತೆಯ ಹಿಂದುಪುರ ಎಂಬಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಯಾರೂ ಸ್ಪಂದಿಸದೇ ಇದ್ದ ಕಾರಣ ಸ್ಥಳೀಯರೇ ಮುಂದಾಗಿ ತಾತ್ಕಾಲಿಕವಾಗಿ ತೇಪೆ ಹಾಕುವ ಕಾರ್ಯವನ್ನು ನಡೆಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸೊರ್ನಾಡು ರಸ್ತೆ, ಹೊಂಡದ ಮೇಲೆ ಸವಾರಿ"