ಬಂಟ್ವಾಳ ತಾಲೂಕಿನಲ್ಲಿ ಭಾನುವಾರದಂತೆ ಸೋಮವಾರವೂ ಉತ್ತಮ ಮಳೆಯಾಗಿದೆ. ತೀವ್ರಗಾಳಿಯಿಂದ ಕೂಡಿದ ಮಳೆಯಾದ ಕಾರಣ ಒಟ್ಟು 5 ಮನೆಗಳಿಗೆ ಸೋಮವಾರ ಹಾನಿಯುಂಟಾಗಿದ್ದು, ಅವುಗಳ ಪೈಕಿ ಒಂದು ಮನೆ ತೀವ್ರ ಹಾನಿಯಾಗಿದೆ.
ಬೆಳಗ್ಗಿನಿಂದಲೇ ಜಡಿಮಳೆ ಇತ್ತು. ನೇತ್ರಾವತಿ ಮಟ್ಟ ಸೋಮವಾರ ಸಂಜೆ ವೇಳೆ 5.9 ಮೀಟರ್ ಇತ್ತು. ಸೋಮವಾರ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಅಬೂಬಕ್ಕರ್ ಅವರ ಮನೆಯ ಆವರಣಗೋಡೆ ಕುಸಿದಿದೆ.ವಿಟ್ಲ ಕಸಬಾಗ್ರಾಮದ ಪಾರ್ವತಿ ಮನೆಯ ಛಾವಣಿ ಕುಸಿದು 40 ಸಾವಿರ ರೂ ನಷ್ಟ ಸಂಭವಿಸಿದೆ. ವಿಟ್ಲ ಕಸಬಾದ ಸಿಂಥಿಯಾ ಮನೆ ಆವರಣ ಗೋಡೆ ಕುಸಿದಿದ್ದರೆ, ಅನಂತಾಡಿ ಗ್ರಾಮದ ಕೇಶವ ಪೂಜಾರಿ ಅವರ ಕೊಟ್ಟಿಗೆ ಹಾನಿಯಾಗಿದೆ. ಸಜೀಪಮುನ್ನೂರು ಗ್ರಾಮದ ಕಮಲಾ ಅವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
Be the first to comment on "ಬಂಟ್ವಾಳದಲ್ಲಿ ಉತ್ತಮ ಮಳೆ, ನೇತ್ರಾವತಿ ಮಟ್ಟ ಏರಿಕೆ"