ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ಆರೆಸ್ಸೆಸ್ ಸ್ವಯಂಸೇವಕ ಶರತ್ ಮಡಿವಾಳ ಅವರ ನೆನಪಿಗೆ ಸಜೀಪಮುನ್ನೂರಿನ ಪಾಡಿಮನೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಶರತ್ ತಂದೆ ತನಿಯಪ್ಪ ಮಡಿವಾಳ ಮತ್ತು ಕುಟುಂಬವನ್ನು ಭೇಟಿ ಮಾಡಿದ ಶಾಸಕರು, ಶರತ್ ಸ್ಮಾರಕದಲ್ಲಿರುವ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಕಂದೂರು ಶ್ರೀಕೃಷ್ಣ ಶಿಶು ಮಂದಿರ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಶಾಂತಿನಗರ ವಠಾರದಲ್ಲಿ ಪುಟಾಣಿ ಮಕ್ಕಳ ಸಹಭಾಗಿತ್ವದಲ್ಲಿ ಶರತ್ ಸ್ಮರಣಾರ್ಥ ವನಮಹೋತ್ಸವ ನಡೆಯಿತು. ಈ ಸಂದರ್ಭ ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಸಚಿನ್ ಮೇಲ್ಕಾರ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.
Be the first to comment on "ಶರತ್ ಸ್ಮರಣೆ, ರಾಜೇಶ್ ನಾಯ್ಕ್ ಅವರಿಂದ ಶ್ರದ್ಧಾಂಜಲಿ"