ಬಂಟ್ವಾಳದಲ್ಲಿ 192 ಫಲಾನುಭವಿಗಳಿಗೆ 1.14 ಕೋಟಿ ರೂ ಸಹಾಯಧನ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಲ್ಲಿ 2018-19ನೇ ಸಾಲಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಯಡಿ 192 ಫಲಾನುಭವಿಗಳಿಗೆ 1.14 ಕೋಟಿ ರೂ.ಸಹಾಯಧನ ಬಿಡುಗಡೆಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತಿಳಿಸಿದ್ದಾರೆ.

ಬಂಟ್ವಾಳದ ಶಾಸಕರ ಕಾರ್ಯಾಲಯದಲ್ಲಿ ಶನಿವಾರ ಸಂಜೆ ಶ್ರಮಶಕ್ತಿ ಯೋಜನೆಯಲ್ಲಿ ಬಿಡುಗಡೆಯಾದ 74 ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.

ಶ್ರಮಶಕ್ತಿ ಯೋಜನೆಯಲ್ಲಿ 74 ಫಲಾನುಭವಿಗಳಿಗೆ 19.50ಲಕ್ಷ,ಸ್ವಯಂ ಉದ್ಯೋಗದಡಿ 20ಫಲಾನುಭವಿಗಲಕಿಗೆ 24.50ಲಕ್ಷ , 66ಫಲಾನುಭವಿಗಳುಗೆ6.60 ಲಕ್ಷ ರೂ.ಕಿರುಸಾಲ ಹಾಗೂಗಂಗಾಕಲ್ಯಾಣದಡಿ 32ಫಲಾನುಭವಿಗಳಿಗೆ 64 ಲಕ್ಷರೂ.ಮಂಜೂರಾಗಿದೆ ಎಂದರು.

ಶಾಸಕರ ಕಾರ್ಯಾಲಯ ಸದಾ ತೆರದಿದ್ದು, ಸರಕಾರದ ಸವಲತ್ತು, ಯೋಜನೆಗಳ ಕುರಿತ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದ ಶಾಸಕರು ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ನಲ್ಲು ಮಹಿಳೆಯರ ಅಭ್ಯುದಯಕ್ಕೆ ಹಲವಾರು ಯೋಜನೆಯನ್ನು ಪ್ರಕಟಿಸಿದೆ ಎಂದರು.

ಜಿಪಂ ಸದಸ್ಯೆ ಕಮಾಲಾಕ್ಷಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಸಫ್ವಾನ್ ಸ್ವಾಗತಿಸಿ,ವಂದಿಸಿದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ.
  

  

Be the first to comment on "ಬಂಟ್ವಾಳದಲ್ಲಿ 192 ಫಲಾನುಭವಿಗಳಿಗೆ 1.14 ಕೋಟಿ ರೂ ಸಹಾಯಧನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*