ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ. ಆಕೆಯೇ ಮೊದಲ ವಿಜ್ಞಾನಿ. ನಮ್ಮ ಆಹಾರ ಸಂಸ್ಕೃತಿಯನ್ನು ಉಳಿಸಲು ಇಂಥ ಕಾರ್ಯಕ್ರಮಗಳು ನಡೆಯಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಶನಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಉಪ್ಪಡ್ ಪಚ್ಚಿಲ್ ಆಯನೊ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲಸಿನ ಹಣ್ಣಿನಲ್ಲಿ ಅಪಾರವಾದ ಪ್ರೋಟಿನ್ ಅಂಶಗಳಿವೆ, ಇದು ಆಹಾರ ಮೌಲ್ಯಗಳ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳಗೊಂಡಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದವರು ಹಣ್ಣಿನ ಮಹತ್ವ ತಿಳಿಸಿದರು.
ಪ್ರಗತಿಪರ ಕೃಷಿಕ ರಾಕೋಡಿ ಈಶ್ವರ ಭಟ್, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಸದಸ್ಯರಾದ ಜಯರಾಮ ರೈ, ಡಾ. ಕಮಲ ಪ್ರಭಾಕರ ಭಟ್, ಪೋಷಕರಾದ ಜಯರಾಮ್, ಮಾತೃಭಾರತಿ ಸಂಸ್ಥೆ ಅಧ್ಯಕ್ಷರಾದ ಅರುಣೋದಯ, ಮುಖ್ಯ ಶಿಕ್ಷಕ ರವಿರಾಜ ಕಣಂತೂರು ಉಪಸ್ಥಿತರಿದ್ದರು. ಅಧ್ಯಾಪಕರಾದ ಸುಮಂತ್ ಆಳ್ವ ನಿರೂಪಿಸಿದರು. ಗಾಯತ್ರಿ ಸ್ವಾಗತಿಸಿದರು. ಸುಮಿತ್ರ ವಂದಿಸಿದರು.
Be the first to comment on "ಕಲ್ಲಡ್ಕದಲ್ಲಿ ಉಪ್ಪಡ್ ಪಚ್ಚಿಲ್ ಆಯನೊ"