ಬಂಟ್ವಾಳ ನಿವಾಸಿ ಮತ್ತು ಹುಡುಗಿಯೊಬ್ಬಳ ನಡುವಿನ ಅಶ್ಲೀಲ ವಿಡಿಯೋ ವನ್ನಿಟ್ಟು ಹಣಕ್ಕಾಗಿ ಪೀಡಿಸಿ ವಸೂಲು ಮಾಡಿದ ಪ್ರಕರಣ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದೆ.
ವಾಯ್ಸ್ ಮೆಸೇಜ್ ಮೂಲಕ ಸುಮಾರು 8 ತಿಂಗಳ ಹಿಂದೆ ಬಂಟ್ವಾಳ ನಿವಾಸಿಯೊಬ್ಬರಿಗೆ ಹುಡುಗಿಯೊಬ್ಬಳ ಪರಿಚಯವಾಗಿದ್ದು, ಕೆಲವು ದಿನಗಳ ನಂತರ ಆ ಹುಡುಗಿಯನ್ನು ಮಂಗಳೂರಿನ ಲಾಡ್ಜ್ ಒಂದರಲ್ಲಿ ಭೇಟಿಯಾಗಿ ದೈಹಿಕ ಸಂಪರ್ಕ ನಡೆಸಿದ ಸಂದರ್ಭ, ಹುಡುಗಿಯು ಆ ವಿಡಿಯೋವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಘಟನೆ ನಡೆದ ಕೆಲವು ದಿನಗಳ ನಂತರ ಬಂಟ್ವಾಳ ನಿವಾಸಿಗೆ ಅಪರಿಚಿತ ವ್ಯಕ್ತಿಯೋರ್ವ ಈ ಅಶ್ಲೀಲ ವಿಡಿಯೋವನ್ನು ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಗಿ ದೂರಲಾಗಿದೆ. ಈ ಬಗ್ಗೆ ಹುಡುಗಿಯಲ್ಲಿ ವಿಚಾರಿಸಿದಾಗ ಆಕೆ ತನ್ನ ಮೊಬೈಲ್ ರಿಪೇರಿಗೆ ಕೊಟ್ಟ ಸಮಯ ವಿಡಿಯೋ ಬೇರೆಯವರಿಗೆ ದೊರಕಿದೆ ಎಂದು ತಿಳಿಸಿದ್ದು, ಆ ವಿಡಿಯೋವನ್ನು ಪಡೆದ ವ್ಯಕ್ತಿ ಬಂಟ್ವಾಳ ನಿವಾಸಿಗೆ ಹಣಕ್ಕಾಗಿ ಪೀಡಿಸಿದ್ದಾನೆ. ಹಣ ಕೊಡಲು ಒಪ್ಪದಿದ್ದಾಗ ಬಂಟ್ವಾಳದಲ್ಲಿ ಅವರನ್ನು ಅಪಹರಿಸಿ 60 ಸಾವಿರ ರೂಪಾಯಿಗಳನ್ನು ಮತ್ತು ಪರ್ಸನ್ನು ಬಲವಂತವಾಗಿ ಕಿತ್ತುಕೊಂಡಿದ್ದು, ಎಟಿಎಂ ಕಾರ್ಡ್ ನ್ನು ಬಳಸಿ 9 ಸಾವಿರ ರೂ ಗಳನ್ನು ಪಡೆದಿದ್ದಾಗಿ ದೂರಲಾಗಿದೆ. ಅದೇ ದಿನ ಮತ್ತೆ 48 ಸಾವಿರ ರೂ ಗಳನ್ನು ಆರೋಪಿಗಳು ಪಡೆದಿದ್ದು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಿ ಹಣಕ್ಕಾಗಿ ನಿರಂತರ ಬೆದರಿಕೆ ಒಡ್ಡಿದ್ದಾಗಿ ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 363, 323, 504, 392, 383, 506 ಜೊತೆಗೆ 34 ಐ.ಪಿ.ಸಿ ಮತ್ತು 66E & 67A ಐ.ಟಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
Be the first to comment on "ಅಶ್ಲೀಲ ವಿಡಿಯೋವನ್ನಿಟ್ಟು ಹಣವಸೂಲಿ: ಬಂಟ್ವಾಳ ನಿವಾಸಿ ದೂರು"