ಶಿಕ್ಷಣವನ್ನು ಕೊಡುವ ಶಿಕ್ಷಕರು ಸಮಾಜದ ಗೌರವಾನ್ವಿತ ವ್ಯಕ್ತಿಗಳು. ಅವರಿಂದ ಉತ್ತಮ ನಾಗರಿಕರು ಹಾಗೂ ಸುಸಂಸ್ಕೃತ ಸಮಾಜ ಸೃಷ್ಟಿಯಾಗುತ್ತದೆ ಎಂದು ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಅಹ್ಮದ್ ಹಾಜಿ ಮುಹಿಯುದ್ದೀನ್ ಹೇಳಿದರು.
ಅವರು ತುಂಬೆ ಪದವಿ ಪೂರ್ವ ಕಾಲೇಜಿ ನಲ್ಲಿ ತನ್ನ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತುಂಬೆ ವಿದ್ಯಾ ಸಂಸ್ಥೆಗೆ ಮ್ಯಾನೆಜ್ ಮೆಂಟ್ ವತಿಯಿಂದ ನೂತನ ಶಾಲಾ ಬಸ್ ಅನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಬ್ಯಾಂಕ್ ಆಫ್ ಬರೋಡಾ ತುಂಬೆ ಬ್ರಾಂಚ್ ನ ಮ್ಯಾನೇಜರ್ ಸಂದೀಪ್, ಎಂಇಟಿ ಟ್ರಸ್ಟಿ ಭೀಫಾತಿಮಾ ಅಹ್ಮದ್ ಹಾಜಿ, ತುಂಬೆ ಐಟಿಐ ಪ್ರಾಂಶುಪಾಲ ನವೀನ್ ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಮೋಲಿ ಎಡ್ನಾ, ಪ್ರತಿಮಾ, ಜಾನೆಟ್ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್ ಕೆ. ವಂದಿಸಿ, ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ನಿರೂಪಿಸಿದರು.
Be the first to comment on "ಶಿಕ್ಷಕರಿಂದ ಸುಸಂಸ್ಕೃತ ಸಮಾಜ ನಿರ್ಮಾಣ: ಡಾ.ಅಹ್ಮದ್ ಹಾಜಿ ಮುಹಿಯುದ್ದೀನ್"