ಪಂಬತ್ತಜೆ ನವದುರ್ಗಾ ಶಕ್ತಿ ಪ್ರಧಾನ ಶ್ರೀ ಲಕ್ಷ್ಮೀ ಜನಾರ್ದನ ದೇವ ಸಾನ್ನಿಧ್ಯದ ವತಿಯಿಂದ ದಿವಂಗತ ಸತ್ಯಗಣಪತಿ ಭಟ್ ಸ್ಮರಣಾರ್ಥವಾಗಿ ಕರೋಪಾಡಿಯ ಪಂಬತ್ತಜೆಯಲ್ಲಿ ಜೂನ್ 8ರಂದು 40 ವಿದ್ಯಾರ್ಥಿಗಳಿಗೆ ಪಂಬತ್ತಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಲೇಖನಿಗಳನ್ನು ನೀಡಲಾಯಿತು.
ಜಾಹೀರಾತು
ಸ್ಥಳೀಯ ಜನರ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ರಿಶಾಲಾಕ್ಷಿ ಕೆ ಮಣೇಲ್ಕಾರ್ ಈ ಕೊಡುಗೆ ನೀಡಿದರು. ಈ ಸಂದರ್ಭ ಪದ್ಯಾಣ ರಾಮಕೃಷ್ಣ ಭಟ್ ದಿವಂಗತ ಸತ್ಯ ಗಣಪತಿ ಭಟ್ ಪಂಬತ್ತಜೆ ಅವರ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಸ್ಥಳೀಯರಾದ ರಾಮಚಂದ್ರ ಕುಲಾಲ್, ಆನೆಕಲ್ಲು ಗೋಪಾಲಕೃಷ್ಣ ಪ್ರಭು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಪಂಬತ್ತಜೆ ಶಾಲೆಗೆ ಉಚಿತ ಪುಸ್ತಕ, ಲೇಖನಿ ಕೊಡುಗೆ"