ಬೆಳ್ತಂಗಡಿ ತಾಲುಕಿನ ಕಡಿರುದ್ಯಾವರ ಗ್ರಾಮದ ಸ.ಹಿ.ಪ್ರಾ ಶಾಲೆ ಕಡಿರುದ್ಯಾವರದಲ್ಲಿ ಶ್ರಮದಾನದ ಮೂಲಕ ತರಕಾರಿ ಗಿಡವನ್ನು ನೆಡಲಾಯಿತು.
ಇತ್ತೀಚಿನ ದಿನಗಳಲ್ಲಿ ತರಕಾರಿ ಕೃಷಿಯ ಅರಿವು ಇಲ್ಲದೇ ಇರುವ ಮಕ್ಕಳಿಗೆ ಕೃಷಿ ಜ್ಞಾನವನ್ನು ತುಂಬಿಸುವುದರ ಜೊತೆಯಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ಬೇಕಾದ ಯೋಗ್ಯ ತರಕಾರಿಗಳು
ಅವಶ್ಯಕವಾಗಿ ಸಿಗುವುದರ ಜೊತೆಯಲ್ಲಿ ದುಬಾರಿ ಬೆಲೆಯ ತರಕಾರಿಯನ್ನು ಅಲ್ಪ ಸ್ವಲ್ಪ ತರುವ ಬದಲು ಶಾಲೆಯ ಹಿತ್ತಿಲಲ್ಲೇ ಕೃಷಿ ಚಟುವಟಿಕೆ ಮಾಡಿದಲ್ಲಿ ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಮೂಡುವಂತಾಗುತ್ತದೆ.
ಮುಂದಿನ ದಿನಗಳಲ್ಲಿ ಕೃಷಿಯ ಮಹತ್ವ ಪಾಲನೆ ಪೋಷನೆ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಕಡಿರುದ್ಯಾವರ ಶಾಲೆಯ SDMC ಅಧ್ಯಕ್ಷರಾದ ಶ್ರೀನಿವಾಸ ಗೌಡ ನೆಲ್ಲಿಪಾಲ್, ಪ್ರಗತಿ ಬಂಧು ಮಲ್ಲಡ್ಕ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ಕೋಲ್ಪೆ, ಆನಂದ ಗೌಡ ಬರಮೇಲು ಮತ್ತು ಕಡಿರುದ್ಯಾವರ ಗ್ರಾಮಸ್ಥರು, ಹಳೆವಿದ್ಯಾರ್ಥಿಗಳು, ಪ್ರಗತಿ ಬಂಧು ಮಲ್ಲಡ್ಕ ಒಕ್ಕೂಟದ ಪದಾಧಿಕಾರಿಗಳು ಸೇವಾಪ್ರತಿನಿಧಿ ಮತ್ತು ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಆನಂದ ಗೌಡ ಬರಮೇಲು ಸ್ವಾಗತಿಸಿ ಶ್ರೀನಿವಾಸ ಗೌಡ ನೆಲ್ಲಿಪಾಲ್ ಇವರು ವಂದಿಸಿದರು.
ವರದಿ:- ರಾಜೇಶ.ಎಂ.ಕಾನರ್ಪ
Be the first to comment on "ಕಡಿರುದ್ಯಾವರ ಶಾಲೆ – ತರಕಾರಿ ಕೃಷಿಯ ಅರಿವು"