ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕಿನ 2019 -2024 ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿ ಚುನಾವಣೆ ಗುರುವಾರ ಸರಕಾರಿ ನೌಕರರ ಭವನದಲ್ಲಿ ನಡೆಯಿತು.
ಶಿಕ್ಷಣ ಇಲಾಖೆಯ ದೊಡ್ಡ ಕೆಂಪಯ್ಯ, ಪ್ರಾನ್ಸಿಸ್ ಡೇಸಾ, ರವಿಕುಮಾರ್, ಸಂತೋಷ ಕುಮಾರ್. ಕಂದಾಯ ಇಲಾಖೆಯ ಸೀತಾರಾಮ್, ಜೆ.ಜನಾರ್ಧನ, ಮಲ್ಲೇಶ್, ಮಂಜುನಾಥ್ , ತೌಪೀಕ್ ಕಣದಲ್ಲಿದ್ದರು.
ಕಂದಾಯ ಇಲಾಖೆಯಿಂದ ಜನಾರ್ದನ ಮತ್ತು ಮಂಜುನಾಥ ಶಿಕ್ಷಣ ಇಲಾಖೆಯಿಂದ ಫ್ರಾನ್ಸಿಸ್ ಡೇಸಾ, ರವಿಕುಮಾರ್ ಮತ್ತು ಸಂತೋಷ್ ಕುಮಾರ್ ಆಯ್ಕೆಗೊಂಡಿದ್ದಾರೆ.
ಇವರಲ್ಲಿ ಶಿಕ್ಷಣ ಇಲಾಖೆಯ 3, ಕಂದಾಯ ಇಲಾಖೆಯ 2 ಪ್ರತಿನಿಧಿಗಳ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ನಾಯಕ್ ರಾಯಿ, ಹಾಗೂ ಮತಗಟ್ಟೆ ಅಧಿಕಾರಿಯಾಗಿ ಮುಖ್ಯೋಪಾಧ್ಯಾಯ ಭಾಸ್ಕರ್ ರಾವ್ ಕಾರ್ಯ ನಿರ್ವಹಿಸಿದರು. ಜೂನ್ 27 ರಂದು ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿ ಚುನಾವಣೆ ನಡೆಯಲಿದೆ.
Be the first to comment on "ಸರಕಾರಿ ನೌಕರರ ಸಂಘದ ಚುನಾವಣೆ, ಫಲಿತಾಂಶ ಪ್ರಕಟ"