ಬಿ.ಸಿ.ರೋಡ್ ಸಮಸ್ಯೆಗಳ ಕುರಿತು ಬಂಟ್ವಾಳನ್ಯೂಸ್ ಬೆಳಕು ಚೆಲ್ಲಿತ್ತು
ಈ ವರದಿಗಳನ್ನು ಓದಿರಿ
ಇಂದಿನ ಸುದ್ದಿ ಇಲ್ಲಿದೆ:
ಬಿ.ಸಿ.ರೋಡ್ ಪೇಟೆಯ ಅಭಿವೃದ್ಧಿಗೆ ಕಳೆದ ವರ್ಷ ರೂಪಿಸಲಾದ ಯೋಜನೆಯ ರೂಪುರೇಷೆಯ ಸಭೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆಯಿತು.
ವಿನ್ಯಾಸಗಾರ ಧರ್ಮರಾಜ್ ಯೋಜನೆಯನ್ನು ವಿವರಿಸಿದರು.ಈ ಸಂದರ್ಭ ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್, ಎಎಸ್ಪಿ ಸೈದುಲು ಅಡಾವತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ. ಉಮೇಶ್ ಭಟ್, ಪೋಲೀಸ್ ಇಲಾಖೆ, ಸಾರಿಗೆ ಇಲಾಖೆ, ಪುರಸಭೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಈಗ ಹೇಗಿದೆ:
ಅಡ್ಡಾದಿಡ್ಡಿ ಪಾರ್ಕಿಂಗ್, ಅಲ್ಲಲ್ಲಿ ಕಸದ ರಾಶಿ, ಸರಿಯಾದ ಬಸ್ ನಿಲ್ದಾಣ ಇಲ್ಲದೇ ಇರುವುದು, ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ನಡೆಯುವವರಿಗೆ ಕತ್ತಲ ಭಾಗ್ಯ, ಕಂಡಕಂಡಲ್ಲಿ ಅನಧಿಕೃತ ವ್ಯಾಪಾರ, ಬೋರ್ಡ್, ಫ್ಲೆಕ್ಸ್ ಗಳು, ಆಗಾಗ್ಗೆ ಪೈಪು ಒಡೆದು ಸ್ಟೇಟ್ ಬ್ಯಾಂಕ್ ಎದುರು ನೀರು ಚೆಲ್ಲುವುದು ಹೀಗೆ ಆಧ್ವಾನಗಳ ಸರಮಾಲೆಯನ್ನೇ ಪ್ರತಿದಿನ ನೋಡುವಂತೆ ಬಿ.ಸಿ.ರೋಡ್ ಇದೆ. ಕಳೆದ ವರ್ಷ ಅಕ್ಟೋಬರ್ ೧ರ ಮೀಟಿಂಗ್‌ನಲ್ಲಿ ಅಧಿಕಾರಿಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಬಂಟ್ವಾಳನ್ಯೂಸ್ ಆಗಾಗ್ಗೆ ಬಿ.ಸಿ.ರೋಡಿನ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದನ್ನು ಗಮನಿಸಬಹುದು.
Be the first to comment on "ಬಿ.ಸಿ.ರೋಡ್ ಸೌಂದರ್ಯವೃದ್ಧಿ – ಸಂಸದ, ಶಾಸಕ ನೇತೃತ್ವದಲ್ಲಿ ಸಭೆ"