- ಡಾ.ಎ.ಜಿ.ರವಿಶಂಕರ್
ತಾಜಾತನ ಹೊಂದಲು ಈ ಚಹವನ್ನು ಸೇವಿಸಿ. ಇಂಥ ಜಾಹೀರಾತುಗಳು ಪ್ರತಿನಿತ್ಯ ಕಾಣಲು ಸಿಗುತ್ತವೆ. ಅಡುಗೆಮನೆಯಲ್ಲಿರುವ ಚಹಾಪುಡಿ ಮತ್ತು ಅದರ ವೈದ್ಯಕೀಯ ಉಪಯೋಗ ಕುರಿತು ಇಲ್ಲಿದೆ ಮಾಹಿತಿ.
- ಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ ತಣ್ಣೀರಿನಲ್ಲಿ ಕಲಸಿದ ಚಹಾ ಹುಡಿಯನ್ನು ತೆಳ್ಳಗಿನ ಬಟ್ಟೆಯಲ್ಲಿ ಇಟ್ಟು ಗಾಯದ ಮೇಲೆ ಕಟ್ಟಬೇಕು. ನೇರವಾಗಿ ಚಹಾ ಹುಡಿಯನ್ನು ಗಾಯದ ಮೇಲೆ ಹಾಕಬಾರದು.
- ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ತಣ್ಣಗಿರುವ ಚಹಾಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಬಾಯಿ ಮುಕ್ಕಳಿಸಬೇಕು.
- ಚಹಾ ಹುಡಿಯನ್ನು ಬಾಯಿಹುಣ್ಣಿನ ಮೇಲೆ ಸಿಂಪಡಿಸಿದರೆ ಹುಣ್ಣು ಬೇಗನೆ ವಾಸಿಯಾಗುತ್ತದೆ. ಚಹಾದಲ್ಲಿ ಬಾಯಿ ಮುಕ್ಕಳಿಸಿದರೂ ಆದೀತು.
- ಚರ್ಮದ ಮೇಲೆ ಕಾಣಿಸಿಕೊಳ್ಳುವ ಸಣ್ಣದಾದ ನೋವುಭರಿತ ಬೋಕ್ಕೆಗಳ ಮೇಲೆ ಚಹಾ ಹುಡಿಯನ್ನು ಲೇಪಿಸಿದರೆ ಇದು ಬೇಗನೆ ಸೋರಿ ಕೀವು ಹೊರಬಂದು ಆರಾಮ ಲಭಿಸುತ್ತದೆ.
- ಭೇದಿಯ ಸಮಸ್ಯೆ ಕಂಡಾಗ ಚಹಾಕೆ ಸ್ವಲ್ಪ ನಿಂಬೆರಸ ಸೇರಿಸಿ ಸಾಧಾರಣ ಅರ್ಧಲೋತದಷ್ಟು ಕುಡಿಯಬೇಕು.
- ಚಹಾ ಸೇವಿಸುವುದರಿಂದ ಒತ್ತಡದ ಪರಿಣಾಮವಾದ ತಲೆನೋವು ನಿವಾರಣೆಯಾಗುತ್ತದೆ.
- ಕಣ್ಣುಗಳು ಆಯಾಸಗೊಂಡಾಗ ತಣ್ಣೀರಿನಲ್ಲಿ ಚಹಾ ಹುಡಿಯನ್ನು ಕಲಸಿ ತೆಳ್ಳಗಿನ ಬಟ್ಟೆಯಲ್ಲಿ ಇಟ್ಟು ಕಣ್ಣಿನ ಮೇಲೆ ಇಟ್ಟುಕೊಳ್ಳಬೇಕು.
- ತಣ್ಣೀರಿನಲ್ಲಿ ಚಹಾ ಹುಡಿಯನ್ನು ಕಲಸಿ ತೆಳ್ಳಗಿನ ಬಟ್ಟೆಯಲ್ಲಿ ಸುತ್ತಿ ಸುಟ್ಟ ಗಾಯದಮೇಲೆ ಇಟ್ಟರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
- ನಿಯಮಿತವಾಗಿ ಚಹಾ ಕುಡಿಯುವುದರಿಂದ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ಇದು ನರಮಂಡಲಗಳಿಗೆ ಬಲದಾಯಕವಾಗಿದ್ದು ವಯಸ್ಕರಲ್ಲಿ ಕಾಣಿಸುವ ಅಂಗಾಂಗಗಳ ಕಂಪನವನ್ನು (parkinsons disease ) ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ಚಹಾ ಪಕ್ಷವಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ಮೂತ್ರದ ಕಲ್ಲಿನ ನಿವಾರಣೆಯಲ್ಲಿ ಚಹಾ ಮಹತ್ತರ ಪಾತ್ರವಹಿಸುತ್ತದೆ.
Be the first to comment on "ಚಹಾ ಕುರಿತು ಚರ್ಚೆ ಯಾಕೆ ಗೊತ್ತಾ?"