ಲೋಕಸಭೆ ಚುನಾವಣೆಯ ಎಲ್ಲ ಏಳು ಹಂತಗಳ ಚುನಾವಣೆ ಮುಕ್ತಾಯಗೊಂಡಿದ್ದು, ಫಲಿತಾಂಶದ ಕುರಿತು ಕ್ಷಣಗಣನೆ ಆರಂಭಗೊಂಡಿದೆ. ಮೇ.23ರಂದು ಫಲಿತಾಂಶವಾದರೂ ಈಗಾಗಲೇ ಮಾಧ್ಯಮಗಳು ಮತದಾನೋತ್ತರ ಸ್ಥಿತಿ ಗತಿ ಆಧರಿಸಿ, ತನ್ನ ಸಮೀಕ್ಷಾವರದಿಗಳನ್ನು ಒದಗಿಸಲಾರಂಭಿಸಿವೆ.
ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಎನ್.ಡಿ.ಎ. ಮತ್ತೆ ಅಧಿಕಾರಕ್ಕೆ ಬರಬಹುದು. ಬಿಜೆಪಿ 306 ಲೋಕಸಭಾ ಸ್ಥಾನಗಳನ್ನು ಗೆದ್ದು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ 132, ಇತರರ 104 ಸ್ಥಾನಗಳನ್ನು ಗೆಲ್ಲಲಿದ್ದಾರೆ.
ನ್ಯೂಸ್ ನೇಶನ್ ಸಮೀಪಕ್ಷೆ ಪ್ರಕಾರ, ಎನ್.ಡಿ.ಎ 290, ಯುಪಿಎ 126 ಇತರೆ 138 ಸೀಟು ಗಳಿಸಬಹುದು.
ರಿಪಬ್ಲಿಕ್ ಭಾರತ್ – ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಎನ್.ಡಿ.ಎ. 305 ಸೀಟು ಗಳಿಸಬಹುದು. ಕಾಂಗ್ರೆಸ್ 124 ಸೀಟು ಗಳಿಸಲಿದೆ ಎಂಬುದು ಅವರ ಲೆಕ್ಕಾಚಾರ.
ಸಂಜೆ 6 ಗಂಟೆಗೆ ಮತದಾನ ಮುಗಿದಿದ್ದು, ಏಳೂ ಹಂತಗಳಲ್ಲಿ ಒಟ್ಟಾರೆ ಸರಾಸರಿ ಶೇ 68ರಷ್ಟು ಮತದಾನ ನಡೆದಿದೆ. ಮತದಾನ ಮುಗಿಯುತ್ತಿದ್ದಂತೆಯೇ ಮಾಧ್ಯಮಗಳು ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟಣೆಗೆ ಸಿದ್ಧತೆ ಆರಂಭಿಸಿದವು.
Be the first to comment on "ಚುನಾವಣೆಗೆ ತೆರೆ, ಯಾರಾಗುತ್ತಾರೆ ದೊರೆ?"