ಮಾನವೀಯತೆಯಿಂದ ಶಾಂತಿಯ ಕಡೆಗೆ ಆದರ್ಶ ಸಾರುತ್ತಿರುವ ರೆಡ್ ಕ್ರಾಸ್ ಸಂಸ್ಥೆ ವಿಶ್ವ ಮಾನ್ಯ ವಾಗಿದೆ ಎಂದು ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಉಮೇಶ್ ನಿರ್ಮಲ್ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ರೋಟರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು .
ನೊಂದವರ, ದುರ್ಬಲರ ,ರೋಗಿಗಳ, ಶೋಷಿತರ, ಪ್ರಾಕೃತಿಕ ವಿಕೋಪಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರ ಸೇವೆಗೆ ಸಮರ್ಪಣೆ ಮಾಡಿದ ಮೇ ತಿಂಗಳ 8 ನೇ ತಾರೀಕು ಮಹತ್ವ ಪಡೆದಿದೆ ಎಂದರು. ವಿಶ್ವದಲ್ಲಿ ಅತೀ ಹೆಚ್ಚು ಜೀವ ಹಾನಿ ಮಾಡುವಲ್ಲಿ ಯುದ್ಧಗಳು ಕಾರಣವಾಗಿವೆ. 1863 ರಿಂದ ಸ್ಥಾಪಕರಾದ ಹೆನ್ರಿ ಡ್ಯುನಾಂಟ್ ಆಶಯವನ್ನು ರಕ್ತ ಸಂಗ್ರಹಣ ಸೇವೆ ಮೂಲಕ ಆರಂಭಿಸಿ ಜನಮಣ್ಣನೆ ಗಳಿಸಿದೆ. ರೆಡ್ ಕ್ರಾಸ್ ಸಂಸ್ಥೆ ವಿಶ್ವ ದಾದ್ಯಂತ ನಿಷ್ಪಕ್ಷಪಾತ ಮತ್ತು ಏಕತೆಯಿಂದ ಸ್ವಯಂಸೇವಕರ ಮಾನವೀಯತೆಯ ತಳಹದಿಯ ಆಧಾರದ ಮೇಲೆ ಕೆಲಸ ಮಾಡುತ್ತದೆ. ರೋಟರಿ ಸಹಭಾಗಿತ್ವ ದಲ್ಲಿ ಇಂತಹ ಭಾವನೆಗಳಿಗೆ ಧ್ವನಿ ನೀಡುವ ಕೆಲಸ ನಿರಂತರವಾಗಿರಲಿ ಎಂದರು.
ಸಮಾರಂಭದಲ್ಲಿ ದಿನದ ಅದೃಷ್ಟವಂತ ಸದಸ್ಯರಾದ ಸುರೇಶ್ ಸಾಲ್ಯಾನ್ ರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಜಯರಾಜ್ ಬಂಗೇರ ಉಪಸ್ತಿತರಿದ್ದರು.
Be the first to comment on "ರೋಟರಿ ಟೌನ್ ವತಿಯಿಂದ ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನಾಚರಣೆ"