ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ರಚಿಸಲಾದ ರಾಣಿ ಅಬ್ಬಕ್ಕ ಪಡೆಯ ತಾಲೂಕು ಘಟಕ ಸೋಮವಾರ ಉದ್ಘಾಟನೆಗೊಂಡಿತು. ಏನು ಈ ಪಡೆ, ಇಲ್ಲಿದೆ ವಿವರ.
- ಪ್ರತಿ ತಾಲೂಕಿಗೆ ಎರಡು ತಂಡಗಳು ಇರುತ್ತವೆ. ಪ್ರತಿ ತಂಡದಲ್ಲಿ ಆರು ಮಂದಿ ಮಹಿಳಾ ಸಿಬ್ಬಂದಿ ಇರುತ್ತಾರೆ.
- ತಾಲೂಕು ಮಟ್ಟದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಮೇಲ್ವಿಚಾರಕರು. ಸಹಾಯಕ ಪೊಲೀಸ್ ಅಧೀಕ್ಷಕರು ಮಾರ್ಗದರ್ಶಕರು.
- ರಾಣಿ ಅಬ್ಬಕ್ಕ ಪಡೆಯ ಸಿಬ್ಬಂದಿ ವಿಶೇಷ ಸಮವಸ್ತ್ರ ಹೊಂದಿರುತ್ತಾರೆ. ನೀಲಿ ಬಣ್ಣದ ಟೀ-ಶರ್ಟ್ ಮತ್ತು ಡಾಂಗ್ರಿ ಪ್ಯಾಂಟ್, ಕಮಾಂಡೋ ಶೂ ಮತ್ತು ಟೋಪಿ ಸಿಬ್ಬಂಧಿಯವರ ಸಮವಸ್ತ್ರವಾಗಿರುತ್ತದೆ.
- ಪ್ರತೀ ತಾಲೂಕು ಮಟ್ಟದ ತಂಡಗಳ ರಾಣಿ ಅಬ್ಬಕ್ಕ ಪಹರೆ ಪಡೆ ವಾಹನದಲ್ಲಿ ಗಸ್ತು ಮಾಡುತ್ತಾ ಕರ್ತವ್ಯ ನಿರ್ವಹಿಸುತ್ತಾರೆ.
- ಅಬ್ಬಕ್ಕ ಪಡೆ ತಂಡವು ಹೆಣ್ಣುಮಕ್ಕಳು ಮತ್ತು ಮಹಿಳೆಯವರಿಗೆ ಸ್ವರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತದೆ.
- ಹಗಲು ಹೊತ್ತಿನಲ್ಲಿ ಶಾಲಾ ಕಾಲೇಜುಗಳ ಹತ್ತಿರ ರೌಂಡ್ಸ್ ಕರ್ತವ್ಯ ನಿರ್ವಹಿಸಿ ಬಾಲಕಿಯರಿಗೆ ರಕ್ಷಣೆ ನೀಡುತ್ತದೆ.
- ಸಾಯಂಕಾಲದ ವೇಳೆ ವಿಧ್ಯಾರ್ಥಿಗಳು ತಂಗುವ ಪಿ.ಜಿಗಳು ಹಾಸ್ಟೇಲ್‌ಗಳ ಹತ್ತಿರ ಗಸ್ತು ಕರ್ತವ್ಯ ಮಾಡುವುದು.
- ಕೋಟ್ಪಾ ಕಾಯ್ದೆಯನ್ವಯ ಕೇಸುಗಳನ್ನು ದಾಖಲಿಸುವುದು
- ಬಸ್‌ಸ್ಟ್ಯಾಂಡ್‌ಗಳು, ರೈಲ್ವೇ ನಿಲ್ದಾಣಗಳು, ಪಾರ್ಕ್, ದೇವಸ್ಥಾನ, ಮಾರುಕಟ್ಟೆ ಪ್ರದೇಶಗಳು ಹಾಗೂ ಪ್ರವಾಸಿ ತಾಣಗಳ ಹತ್ತಿರ ಗಸ್ತು ತಿರುಗುವುದು
- ಕಿಡಿಗೇಡಿಗಳು ಮತ್ತು ಹೆಣ್ಣುಮಕ್ಕಳನ್ನು ಚುಡಾಯಿಸುವವರ ಮೇಲೆ ಕಣ್ಣಿಟ್ಟು ಅಂತವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವುದು.
- ಜಾತ್ರೆ, ಉತ್ಸವಗಳು, ಪ್ರತಿಭಟನೆ ಮತ್ತು ಮೆರವಣಿಗೆಗಳ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಈ ಪಡೆ ಮಾಡುತ್ತದೆ.
Be the first to comment on "ಕಿಡಿಗೇಡಿಗಳಿಗೆ ಪಾಠ ಕಲಿಸಲು ಬಂದಿದೆ ರಾಣಿ ಅಬ್ಬಕ್ಕ ಪಡೆ"