
ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ 2019ನೇ ಸಾಲಿನ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 625 ರಲ್ಲಿ 624 ಅಂಕ ಗಳಿಸಿದ್ದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಈ ಸಂಭ್ರಮವನ್ನು ಹೆತ್ತವರಾದ ರಾಜನಾರಾಯಣ ಭಟ್ ಕೂಡೂರು ಮತ್ತು ಗೀತಾ ಆರ್ ಭಟ್ ಇವರೊಂದಿಗೆ ಹಂಚಿಕೊಂಡಾಗ.
ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ 2019ನೇ ಸಾಲಿನ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 625 ರಲ್ಲಿ 624 ಅಂಕ ಗಳಿಸಿದ್ದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಶಾಲೆ ಸತತ 16 ನೇ ವರ್ಷ ಸತತ ನೂರು ಶೇ. ಫಲಿತಾಂಶವನ್ನು ಪಡೆದ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಲ್.ಎನ್.ಕೂಡೂರು ತಿಳಿಸಿದರು.
ಅವರು ಮಂಗಳವಾರ ಫಲಿತಾಂಶದ ಬಳಿಕ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಲೆ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಜಯರಾಮ ರೈ ಸಾಧನೆಯ ಬಗ್ಗೆ ಅಂಕಿ ಅಂಶ ನೀಡಿ ಈ ಬಾರಿ 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಚಿನ್ಮಯಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಶಾಲೆಯ ನವ್ಯಶ್ರೀ 621 ಅಂಕ ಗಳಿಸಿದರೆ, ಕಾರ್ತಿಕ್ ಶೆಟ್ಟಿ ಹಾಗೂ ಪುಷ್ಪರಾಜ್ 620 ಅಂಕ ಗಳಿಸಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿ ಮೋನಪ್ಪ ಶೆಟ್ಟಿ, ಜತೆ ಕಾರ್‍ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಗೋಕುಲ್ ಶೇಟ್ ಉಪಸ್ಥಿತರಿದ್ದರು.
Be the first to comment on "624 ಅಂಕ ಗಳಿಸಿದ ವಿಟ್ಲದ ಚಿನ್ಮಯಿ"