- ಅಲ್ಲಲ್ಲಿ ಮತಯಂತ್ರ ಕುರಿತು ಕಂಪ್ಲೈಂಟ್
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 249 ಮತಗಟ್ಟೆಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಸರದಿಯಲ್ಲಿ ನಿಂತ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಬಂಟ್ವಾಳದ ಭಂಡಾರಿಬೆಟ್ಟುವಿನಲ್ಲಿರುವ ಎಸ್.ವಿ.ಎಸ್. ಪ್ರಾಥಮಿಕ ಶಾಲೆಯಲ್ಲಿರುವ ಮತಕೇಂದ್ರಕ್ಕೆ ಅವಧಿಗೆ ಮುನ್ನವೇ ಪತ್ನಿ, ಹಾಗೂ ಕುಟುಂಬದೊಂದಿಗೆ ಆಗಮಿಸಿ ಮೊದಲ ಮತದಾರರಾಗಿ ಮತ ಚಲಾಯಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಂಗಳೂರು ಉತ್ತರದ ತೆಂಕ ಎಡಪದವು ಗ್ರಾಮದ ಭಾಗ ಸಂಖ್ಯೆ 187ರ ಸ್ವಾಮಿ ವಿವೇಕಾನಂದ ಹೈಸ್ಕೂಲ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇದೇ ವೇಳೆ ಅಲ್ಲಲ್ಲಿ ಮತಯಂತ್ರ ಕೆಟ್ಟುಹೋಗಿರುವ ಕಂಪ್ಲೈಂಟ್ ಕೂಡ ಬಂತು.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ನಲ್ಕೆಮಾರ್ ಶಾಲೆಯಲ್ಲಿ ಮತದಾನದ ಯಂತ್ರ ಕೆಟ್ಟುಹೊಗಿದ್ದು ಮತದಾನ ಪ್ರಕ್ರಿಯೆ ಇನ್ನೂ ಕೂಡಾ ಆರಂಭವಾಗಿಲ್ಲ.
ಭಾಗ ಸಂಖ್ಯೆ 52, ಕ್ರ.ಮ.ಸಂಖ್ಯೆ 328 ಬೂತ್ ನ ಒಂದು ಕೊಠಡಿಯ ಮತಯಂತ್ರ ಕೆಟ್ಟುಹೊಗಿದ್ದು ಮತದಾನಕ್ಕಾಗಿ ಬಂದ ವರು ಕೆಲವರು ಕಾದು ಕಾದು ಸುಸ್ತಾದರೆ ಹಿರಿಯ ವ್ಯಕ್ತಿಗಳು ವಾಪಾಸು ಮನೆಗೆ ಹೋಗುವಂತಾಯಿತು.
ಅಮ್ಟೂರು ಮತಗಟ್ಟೆಯಲ್ಲೂ ಮತಯಂತ್ರ ಕೈಕೊಟ್ಟ ಕುರಿತು ವರದಿಗಳಾಗಿದ್ದು, ಇದೇ ರೀತಿ ಮುಂದುವರಿದರೆ ಮತದಾನ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗುವ ಆತಂಕವೂ ಎದುರಾಗಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127
Be the first to comment on "ಮತಯಂತ್ರದ complaint ನಡುವೆ ಚುರುಕಾದ ಮತದಾನ, ಸಾಲಲ್ಲಿ ನಿಂತು ಓಟು ಹಾಕಿದ ಮತದಾರ"