ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದು ಗಂಟೆಗಳೇ ಕಳೆದಿವೆ. ರ ್ಯಾಂಕ್ ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ ಟಾಪರ್ ಗಳ ಪಟ್ಟಿಯೂ ಹೊರಬಿದ್ದಿದೆ. ಎಲ್ಲರಿಗೂ ಅಭಿನಂದನೆ. ತೇರ್ಗಡೆಯಾದವರಿಗೆಲ್ಲರಿಗೂ ಬೆಸ್ಟ್ ಆಫ್ ಲಕ್. ನಪಾಸಾದವರಿಗೂ ಸಪ್ಲಿಮೆಂಟರ್ ಪರೀಕ್ಷೆ ಬೇಗನೇ ಇದೆ. ಅದರ ವಿವರಗಳನ್ನು ತಿಳಿದುಕೊಳ್ಳುವ ಮೊದಲು ಇಲ್ಲೊಂದು ಸಂತಸದ ಸುದ್ದಿ.
ದ.ಕ. ಜಿಲ್ಲೆಯ ಕೊಯ್ಲದ ಎಂಡೋಪಾಲನಾ ಕೇಂದ್ರದ ವಿದ್ಯಾರ್ಥಿ ವಸಂತ ಮತ್ತು ಗಂಗಾರತ್ನ ಪುತ್ರನಾದ ಅಭಿಷೇಕ್ ದ್ವಿತೀಯ ಪಿ.ಯು.ಸಿ. ಕಲಾವಿಭಾಗದಲ್ಲಿ 63 ಶೇಕಡಾ ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾನೆ ಎಂದು ಸೇವಾ ಭಾರತಿ ಮಂಗಳೂರು ಮಾಹಿತಿ ನೀಡಿದೆ. ಈ ಸಾಧನೆಗೈಯಲು ಸಹಕರಿಸಿದ ದ.ಕ. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿ, ಬರಹಗಾರರಾದ ಕುಮಾರಿ ಲಾವಣ್ಯ ಇವರುಗಳನ್ನು ಸೇವಾಭಾರತಿ ಕೃತಜ್ಞತಾಪೂರ್ವಕವಾಗಿ ಸ್ಮರಿಸಿದೆ. ಮುಂದೆ ಪದವಿ ಶಿಕ್ಷಣವನ್ನು ಮುಂದುವರೆಸುವ ಇಚ್ಛೆಯನ್ನು ಅಭಿಷೇಕ್ ವ್ಯಕ್ತ ಪಡಿಸಿದ್ದಾನೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅನುತ್ತೀರ್ಣ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ನಿಗದಿ ಪಡಿಸಿದ ದಿನಾಂಕಗಳು
- ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲು ಕೊನೆಯ ದಿನಾಂಕ ಏಪ್ರಿಲ್ 30, 2019.
- ಕಾಲೇಜಿನವರು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ ಸಂದಾಯ ಮಾಡಬೇಕಾದ ಕೊನೆಯ ದಿನಾಂಕ ಮೇ 02, 2019.
- ಕಾಲೇಜಿನವರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ದಿನಾಂಕ ಮೇ 04, 2019
ಜೂನ್ ತಿಂಗಳಲ್ಲಿ ನಡೆಸಲಾಗುವ ಪೂರಕ ಪರೀಕ್ಷೆಗೆ ಅನುತ್ತೀರ್ಣ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕಗಳ ವಿವರ
- ಒಂದು ವಿಷಯಕ್ಕೆ ರೂ. 140
- ಎರಡು ವಿಷಯಕ್ಕೆ ರೂ. 270
- ಮೂರು ಅಥವಾ ಹೆಚ್ಚಿನ ವಿಷಯಗಳಿಗೆ ರೂ. 400
ಎಸ್‌ಸಿ/ಎಸ್‌ಟಿ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತು ಪಡಿಸಿದ ಶುಲ್ಕವಾಗಿದೆ.
ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಕಡ್ಡಾಯವಾಗಿ ಸಲ್ಲಿಸಬೇಕಾದ ಅಂಕಪಟ್ಟಿ ಶುಲ್ಕ ರೂ. 50
ಫಲಿತಾಂಶ ತಿರಸ್ಕರಣಾ ಶುಲ್ಕ
- ಪ್ರಥಮ ಬಾರಿಗೆ ಒಂದು ವಿಷಯಕ್ಕೆ ರೂ. 175
- ದ್ವಿತೀಯ ಹಾಗೂ ಅಂತಿಮ ಬಾರಿಗೆ ಒಂದು ವಿಷಯಕ್ಕೆ ರೂ. 350
Be the first to comment on "ಎಂಡೋ ಪಾಲನಾ ಕೇಂದ್ರದ ವಿದ್ಯಾರ್ಥಿ ಅಭಿಷೇಕ್ ಫಸ್ಟ್ ಕ್ಲಾಸ್ ಪಾಸ್"