ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ಆಸೆಗಾಗಿ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಮತದಾರರು ದೂರವಿಡಲು ತೀರ್ಮಾನಿಸಿದ್ದಾರೆ ಎಂದು ಬಂಟ್ವಾಳ ತಾಪಂ ಸದಸ್ಯ, ಬಂಟ್ವಾಳ ವಿಧಾನಸಭಾ ಕ್ಷೇತ್ರ, ಚುನಾವಣಾ ನಿರ್ವಹಣ ಸಮಿತಿಯ, ಮಾಧ್ಯಮ ಸಮನ್ವಯ ಪ್ರಮುಖ್ ಪ್ರಭಾಕರ ಪ್ರಭು ಕರ್ಪೆ ಹೇಳಿದರು.
ಅರಳ 31ನೆ ಬೂತ್ ಮತ್ತಿತರ ಪ್ರದೇಶಗಳಲ್ಲಿ ವಿಶೇಷ ಸಂಪರ್ಕ ಅಭಿಯಾನದ ವೇಳೆ ಮಾತನಾಡಿದ ಅವರು, ಜಗತ್ತಿನ ಎಲ್ಲಾ ದೇಶಗಳಿಂದಲೂ ಗೌರವಕ್ಕೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದ ಸಂಕಲ್ಪ ಪತ್ರದಲ್ಲಿ ತಿಳಿಸಿದಂತೆ, ಕಾಶ್ಮೀರದ ಸಮಸ್ಯೆಗೆ ಪರಿಹಾರ, ಸೇನಾ ಪಡೆಗಳಿಗೆ ಪೂರ್ಣ ಅಧಿಕಾರ, ಸಂವಿಧಾನ ವ್ಯಾಪ್ತಿಯೊಳಗೆ ರಾಮ ಮಂದಿರ, ಜಿಎಸ್ ಟಿ ಸರಳೀಕರಣ ಮುಂದಾದ ಘೋಷಣೆಗಳಿದ್ದು, ಜನರಿಗೆ ಅನುಕೂಲಕರವಾಗಿವೆ ಎಂದರು. ಕಳೆದ 10 ತಿಂಗಳಿಂದ ಸರಕಾರದಿಂದ ಲಭಿಸುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು , ಜನಸಾಮಾನ್ಯರ, ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಕೆಲಸಗಳನ್ನು ಗಮನಿಸಿ, ಮತ್ತು ಜಿಲ್ಲೆಗೆ ಕೋಟಿ, ಕೋಟಿ ಅನುದಾನವನ್ನು ತಂದು ಜನ ಮೆಚ್ಚುಗೆ ಗಳಿಸಿದ ಬಿಜೆಪಿಯ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಅವರಿಗೆ ಮತ ನೀಡುವ ಮುಖಾಂತರ ಮತ್ತೊಮ್ಮೆ ಕರಾವಳಿಯಲ್ಲಿ ಕಮಲ ಅರಳಿಸಿ, ಮೋದಿ ಅವರನ್ನು ಪ್ರಧಾನಿಯಾಗಿಸುವಂತೆ ಕೋರಿದರು.
Be the first to comment on "ಜೆಡಿಎಸ್-ಕಾಂಗ್ರೆಸ್ ದೂರವಿಡಲು ಜನತೆ ತೀರ್ಮಾನ: ಪ್ರಭಾಕರ ಪ್ರಭು"