ಶನಿವಾರ ಮಧ್ಯಾಹ್ನ 3.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಪ್ರಚಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಲ್ಲೀಗ ಬಿಗು ಭದ್ರತೆ.
ಪೊಲೀಸರು ನಗರದ ಹೋಟೆಲ್, ಲಾಡ್ಜ್ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ಸ್ಟ್ಯಾಂಡ್ ಗಳ ಮೇಲೆ ನಿಗಾ ಇರಿಸಿದ್ದಾರೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ 24ಗಂಟೆಯೂ ಬಂದೋಬಸ್ತ್ ನಡೆಸಲಾಗುತ್ತಿದ್ದು, ಪ್ರತಿ ಠಾಣೆಯಲ್ಲಿ ರೌಂಡ್ಸ್ ಹೆಚ್ಚಿಸಲಾಗಿದೆ. ಸಮಾವೇಶ ನಡೆಯಲಿರುವ ನೆಹರು ಮೈದಾನದ ಸುತ್ತ ಭದ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಶನಿವಾರ ಮಧ್ಯಾಹ್ನ 1ರಿಂದ ಸಂಜೆ 7ಗಂಟೆಯವರೆಗೆ ಪಂಪ್‌ವೆಲ್, ಕೂಳೂರು, ನಂತೂರಿನಿಂದ ಒಳಗೆ ಬಸ್ ಹಾಗೂ ಇತರ ಯಾವುದೇ ವಾಹನ ಸಂಚಾರದ ವ್ಯವಸ್ಥೆ ಕುರಿತು ಮಾತುಕತೆ ನಡೆದಿದೆ. ಒಟ್ಟಾರೆಯಾಗಿ ಇಡೀ ಮಂಗಳೂರು ಈಗ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಕಟ್ಟೆಚ್ಚರದಲ್ಲಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127
Be the first to comment on "ಮೋದಿ ಭೇಟಿ, ಮಂಗಳೂರಲ್ಲಿ ಕಟ್ಟೆಚ್ಚರ"