ಬಂಟ್ವಾಳ ತಾಲೂಕು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಬಾಲಾಲಯ ಪ್ರತಿಷ್ಠೆಗೆ ಶಿಲಾನ್ಯಾಸ ಸಮಾರಂಭ ಗುರುವಾರ ಪುರೋಹಿತ ವಿಜಯಕೃಷ್ಣ ಐತಾಳ್ ಪುಂಜೂರು ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಿತು. ಪುರೋಹಿತ ಗಣಪತಿ ಐತಾಳ್ ಮಾರ್ಗದರ್ಶನ ನೀಡಿದರು.
ಬಾಲಾಲಯ ನಿರ್ಮಾಣ ಕಾಮಗಾರಿ ನಿರ್ವಹಿಸುವ ಹರೀಶ್ ಹಂಚಿಕಟ್ಟೆ ಹಾಗೂ ಹರೀಶ್ ಮಠದಬೆಟ್ಟು ಅವರಿಗೆ ಜೀರ್ಣೋದ್ಧಾರ ಸಮಿತಿಯಿಂದ ಪ್ರಸಾದ ನೀಡಲಾಯಿತು.
ಕ್ಷೇತ್ರದ ಮೊಕ್ತೇಸರರಾದ ಚಂದ್ರಹಾಸ ಶೆಟ್ಟಿ ಎಚ್., ಕೊರಗಪ್ಪ ಗೌಡ, ವಿಠಲ್ ಎಂ, ಉಮೇಶ್ ಆಳ್ವ, ದಯಾನಂದ ಕೋಡಿ, ಗಿರಿಧರ್ ಎಸ್, ಸುರೇಂದ್ರ ಪೈ, ಜೀರ್ಣೋದ್ಧಾರ ಸಮಿತಿಯ ಕುಸುಮಾಕರ ಶೆಟ್ಟಿ, ಪುರುಷೋತ್ತಮ ಪೂಜಾರಿ, ಧನಂಜಯ ಶೆಟ್ಟಿ ನಾಡಬೆಟ್ಟು, ರಾಧಾಕೃಷ್ಣ ರೈ ಕೊಟ್ಟುಂಜ, ರಾಮಣ್ಣ ಶೆಟ್ಟಿ ಕಲ್ಕೊಟ್ಟೆ, ಶಶಿಕಾಂತ ಶೆಟ್ಟಿ, ಶಿವರಾಮ ಶೆಟ್ಟಿ ದೋಟ, ಶಿವರಾಮ ಭಂಡಾರಿ, ಆನಂದ ಶೆಟ್ಟಿ ಆರುಮುಡಿ, ಎಸ್.ಪಿ.ಸರಪಾಡಿ, ಸಂತೋಷ್ ಶೆಟ್ಟಿ, ಚೇತನ್ ಬಜ, ರಾಹುಲ್ ಕೋಟ್ಯಾನ್, ಸುಂದರ ಬಾಚಕೆರೆ, ಚಿನ್ನಯ ನಾಯ್ಕ್, ವ್ಯವಸ್ಥಾಪಕ ಗಿರೀಶ್ ನಾಯ್ಕ್ ಮೊದಲಾದವರಿದ್ದರು.
Be the first to comment on "ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ: ಬಾಲಾಲಯ ಪ್ರತಿಷ್ಠೆಗೆ ಶಿಲಾನ್ಯಾಸ"