ವಿಶ್ವ ಸಂಸ್ಥೆ ಮುಂದಿಟ್ಟರುವ ಸುಸ್ಥಿರ ಅಭಿವೃದ್ಧಿ ಗುರಿ ಜಗತ್ತಿನ ಸರ್ವತೋಮುಖ ಅಭಿವೃದ್ಧಿ ಬಯಸುತ್ತದೆ. ಭಾರತದ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ತನ್ನ ಪ್ರಣಾಳಿಕೆಗಳ ಮೂಲಕ ಚುನಾವಣೆ ಸಂದರ್ಭದಲ್ಲಿ ಬೇಡಿಕೆ ಈಡೇರಿಸುವ ಬಗ್ಗೆ ಆಗ್ರಹ ಪಡಿಸುವ ನಿರ್ಣಯವನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ವಿವಿಧ ರಾಜಕೀಯ ಪಕ್ಷಗಳಿಗೆ ಮಂಡಿಸಿದೆ.
ಬಿ ಸಿ ರೋಡಿನ ರೋಟರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್ ನಿರ್ಣಯವನ್ನು ಅಂಗೀಕರಿಸಲಾಯಿತು.
ಭಾರತ ದೇಶದ 2011ರ ಜನಗಣತಿಯಂತೆ 47ಕೋಟಿ ಮಕ್ಕಳ ಹಿತರಕ್ಷಣಾ ದೃಷ್ಟಿಯಿಂದ ಹದಿಹರೆಯದವರಲ್ಲಿ ರಕ್ತ ಹೀನತೆ,ಅಪೌಷ್ಟಿಕತೆ ತಡೆಯಲು ಕ್ರಮ ವಹಿಸಬೇಕು. ಬಾಲ್ಯ ವಿವಾಹ ಸಂಪೂರ್ಣ ನಿಷೇಧಿಸಿ,ಉಲ್ಲಂಘನೆ ಗೆ ಕಠಿಣ ಕ್ರಮ,ಬಲವಂತದ ಮದುವೆಗೆ ಗುರಿಯಾದವರ ಪುನರ್ವಸತಿ ಕ್ರಮ ವಹಿಸಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು 18 ವರ್ಷದ ಒಳಗಿನ ಮಕ್ಕಳಿಗೆ ವಿಸ್ತರಿಸಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆ ಗಳನ್ನು ಪರಿಣಾಮ ಕಾಲಿಯಾಗಿ ಆಯೋಜಿಸುವುದು.ಮಕ್ಕಳ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸುವುದು. ಹದಿಹರೆಯದವರಲ್ಲಿ ಕಾನೂನು ಉಲ್ಲಂಘನೆ ಹಾಗೂ ಮಾದಕ ದ್ರವ್ಯ ವ್ಯಸನ ಬಲಿಯಾಗುವುದನ್ನು ತಡೆಯಲು ಅರ್ಥಪೂರ್ಣ ಕ್ರಿಯಾ ಯೋಜನೆ ಜಾರಿಗೆ ತನ್ನಿ. ಹದಿಹರೆಯದವರಲ್ಲಿ ಕೌಶಲ್ಯಾಭಿವೃದ್ದಿ ಅವಕಾಶಗಳನ್ನು ಸೃಷ್ಟಿಸಿ. ಹದಿಹರೆಯದವರ ಮೇಲಾಗುವ ವಿವಿಧ ಅಪರಾಧ ಪ್ರಕರಣಗಳನ್ನು ನಿರ್ಲಕ್ಷ್ಯತೆ ಮಾಡದೆ ಶೀಘ್ರದಲ್ಲಿ ಕ್ರಮ ವಹಿಸಬೇಕು. ನಗರದ ಕೊಳೆಗೇರಿ, ಬಡಜನರಿರುವ ಸ್ಥಳಗಳಲ್ಲಿ ಮಕ್ಕಳಿಗೆ ವಿಶೇಷ ಯೋಜನೆ ಜಾರಿಗೆ ತನ್ನಿ ಎಂಬ ಹಕ್ಕೊತ್ತಾಯ ಮಂಡಿಸಲಾಯಿತು. ಮೇಲಿನ ವಿಷಯಗಳಿಗೆ ತುರ್ತಾಗಿ ಗಮನ ಹರಿಸಿ ಮುಂದಿನ ದಿನಗಳಲ್ಲಿ ಸಮೃದ್ಧಿ, ಅಭಿವೃದ್ಧಿ, ಆರೋಗ್ಯ, ರಕ್ಷಣೆ, ಭವಿಷ್ಯವನ್ನು ಹದಿಹರೆಯದವರಲ್ಲಿ ಖಾತ್ರಿ ಪಡಿಸುವ ಮೂಲಕ ದೇಶದ, ರಾಜ್ಯ ದ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ರಾಜಕೀಯ ಪಕ್ಷಗಳು ಮುಂದಾಗಬೇಕೆಂಬ ಆಗ್ರಹ ಮಂಡನೆ ಸರ್ವಾನುಮತದಿಂದ ಕೃಗೊಳ್ಳಲಾಯಿತು. ವೇದಿಕೆಯಲ್ಲಿ ರೋಟರಿ ಪದಾಧಿಕಾರಿಗಳಾದ ಜಯರಾಜ್ ಬಂಗೇರ, ಜೋತೀಂದ್ರ ಪ್ರಸಾದ್ ಶೆಟ್ಟಿ, ಸುರೇಶ್ ಬಿ ,ನಾಗೇಶ್ ಎಂ ಉಪಸ್ತಿತರಿದ್ದರು.
Be the first to comment on "ಮಕ್ಕಳ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ರಾಜಕೀಯ ಪಕ್ಷಗಳಿಗೆ ರೋಟರಿ ಆಗ್ರಹ"